ಕಡಬ: ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸವಾರರಿಗೆ ಗಾಯವಾದ ಘಟನೆ ಕಡಬ ಸಮೀಪದ ಹಳೆ ಸ್ಟೇಷನ್ ಎಂಬಲ್ಲಿ ಅ.18ರ ಮುಂಜಾನೆ ನಡೆದಿದೆ.
ಕಡಬದಲ್ಲಿ ಪಿಗ್ಮಿ ಸಂಗ್ರಾಹಕರಾಗಿರುವ ಕೋಡಿಂಬಾಳ ಹರಿಮನೆ ನಿವಾಸಿ ರಮೇಶ್ ಹಾಗೂ ಕಡಬ ಗ್ರಾಮದ ಅಲೂಂಗೂರು ನಿವಾಸಿ ಲಿಂಗಪ್ಪ ಗೌಡ ಎಂಬವರು ಮದುವೆ ಆಮಂತ್ರಣ ನೀಡಲೆಂದು ಕೊಂಬಾರಿಗೆ ತೆರಳಿದ್ದು, ಅಲ್ಲಿಂದ ಹಿಂದಿರುಗಿ ಕಡಬಕ್ಕೆ ಬರುತ್ತಿದ್ದು ಈ ವೇಳೆ ಹಳೇಸ್ಟೇಷನ್ ಸಮೀಪ ಕಾರಿಗೆ ಡಿಕ್ಕಿ ಹೊಡೆಯಿತೆನ್ನಲಾಗಿದ್ದು, ಲಿಂಗಪ್ಪ ಅವರ ಕಾಲಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಪುತ್ತೂರು ಆಸ್ಪತ್ರೆ ಯಲ್ಲಿ ದಾಖಲಿಸಲಾಗಿದ್ದು, ರಮೇಶ್ ಅವರಿಗೆ ಕಣ್ಣಿಗೆ ಗಾಯವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿಗೆ ಕೊಂಡೊಯ್ಯಲಾಗಿದೆ.
ಜಖಂಗೊಂಡ ವಾಹನಗಳನ್ನು ಕಡಬ ಠಾಣೆಯಲ್ಲಿ ಇರಿಸಲಾಗಿದ್ದು ಈ ಬಗ್ಗೆ ಇದುವರೆಗೆ ಪ್ರಕರಣ ದಾಖಲಾಗಿಲ್ಲ ಎಂದು ಕಡಬ ಪೋಲಿಸರು ತಿಳಿಸಿದ್ದಾರೆ.