ಬೆಂಗಳೂರು: ಕೇಂದ್ರ ಸರ್ಕಾರ ರದ್ದು ಮಾಡಿರುವ ಹಳೇ ನೋಟುಗಳನ್ನು ಬದಲಾವಣೆ ಮಾಡಿಸಿ ಕಲರ್ ಜೆರಾಕ್ಸ್ ಮಾಡಿ ಬದಲಾವಣೆ ಮಾಡುತ್ತಿದ್ದ 5 ಮಂದಿ ಖೋಟಾನೋಟು ದಂಧೆಕೋರರನ್ನು ಪೂರ್ವ ವಿಭಾಗದ ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 80 ಲಕ್ಷ ಅಮಾನೀಕರಣಗೊಂಡಿರುವ ನೋಟುಗಳು ಹಾಗೂ 5 ಕೋಟಿಯಷ್ಟು ಕಲರ್ ಜೆರಾಕ್ಸ್ ಮಾಡಿರುವ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಚ್ಬಿಆರ್ ಬಡಾವಣೆ ಬಳಿಯ ಪೆಟ್ರೋಲ್ ಬಂಕ್ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು , 5 ಕೋಟಿ ರೂ. ಮೊತ್ತದ ಕಲರ್ ಜೆರಾಕ್ಸ್ ನೋಟುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಎಸ್.ಡಿ.ಶರಣಪ್ಪ ಹೇಳಿದರು.
ಕೆ.ಆರ್.ಪುರದ ಸುರೇಶ್ಕುಮಾರ್, ರಾಜಾಜಿನಗರದ ರಾಮಕೃಷ್ಣ, ಆನೇಕಲ್ನ ಮಂಜುನಾಥ್, ಹೊಂಗಸಂದ್ರದ ವೆಂಕಟೇಶ್, ದೇವಾನಂದ ಬಂಧಿತರು ಎಂದೂ ತಿಳಿಸಿದ್ದಾರೆ. 500ರೂ. ಹಾಗೂ 1,000 ರೂ. ಮುಖಬೆಲೆಯ ಹಳೇ ನೋಟುಗಳನ್ನು ಕಲರ್ ಜೆರಾಕ್ಸ್ ಮಾಡಿಸುತ್ತಿದ್ದ ಆರೋಪಿಗಳು, ಕಂತೆಗಳನ್ನಾಗಿ ಮಾಡುತ್ತಿದ್ದರು. ಇಂಥ ಕಂತೆಗಳನ್ನೇ ಕೇರಳದ ಬೇನೂರು- ಕುಂದಡುಕ್ಕಂ ರಸ್ತೆಯಲ್ಲಿರುವ ಫಾರ್ಮ್ಹೌಸ್ನಲ್ಲಿ ಇರಿಸಿದ್ದರು.