ಮಂಗಳೂರು: ಪುನೀತ್ ರಾಜ್ ಕುಮಾರ್ ನಮ್ಮ ಸಮುದಾಯಯಕ್ಕೆ ಏನಾದರೂ ಮಾಡಿದ್ದಾನೆಯೇ? ಆತನ ಸಾವನ್ನು ಸ್ಟೇಟಸ್‌ನಲ್ಲಿ ಹಾಕಿ ಏನು ವಿಜೃಂಭಣೆ ಮಾಡುತ್ತೀರಾ ಎನ್ನುವ 1.04 ನಿಮಿಷದ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬ್ಯಾರಿ ಭಾಷೆಯಲ್ಲಿ ಮಾತನಾಡುವ ವ್ಯಕ್ತಿಯೊಬ್ಬ ‘ಎಂಥಾ ಅವಸ್ಥೆ ಮರ್ರೇ, ಎಲ್ಲರ ಸ್ಟೇಟಸ್‌ನಲ್ಲಿ ಪುನೀತ್ ರಾಜ್‌ಕುಮಾರ್ ನಿಧನದ ವೀಡಿಯೋಗಳು, ಸ್ವಂತ ಕುಟುಂಬದವರು ಸತ್ತರೂ ಇಷ್ಟು ಬೇಜಾರು ಮಾಡುವುದಿಲ್ಲ.
ನಮ್ಮ ಸಮುದಾಯಕ್ಕೆ ಆತನ ಕೊಡುಗೆ ಏನು. ಸಾವು ಎಲ್ಲರಿಗೂ ಬರುತ್ತದೆ. ಅದನ್ನು ಸ್ಟೇಟಸ್‌ನಲ್ಲಿ ಯಾಕೆ ಹಾಕುವುದು. ಇದು ಭಯಂಕರ ಅವಸ್ಥೆಯಾಯಿತಲ್ಲವೇ. ಚಡ್ಡಿಗಳಿಗೆ ಮಾತ್ರ ಆತ ಸಹಾಯ ಮಾಡಿದ್ದಾನೆ.ಅದನ್ನ ತೆಗೆಯಿರಿ. ನಾವೆಲ್ಲಾ ಕಲಿಯದವ್ರು ನೀವೆಲ್ಲಾ ಕಲಿತವರು, ಹಾಗಿರುವಾಗ ಹೀಗೆ ಯಾಕೆ ಸ್ಟೇಟಸ್ ಹಾಕಿ ವಿಜೃಂಭಣೆ ಮಾಡ್ತೀರಿ? ಸ್ಟೇಟಸ್ ತೆಗಿಯಿರಿ, ಹರಾಮಿಗಳ ಹಾಗೆ ಯಾಕೆ ಮಾಡ್ತೀರಿ? ಎಂದು ಹೇಳಿಕೊಂಡಿದ್ದಾನೆ. ಸದ್ಯ ಈ ಆಡಿಯೋ ವೈರಲ್ ಆಗುತ್ತಿದೆ.