ಮಂಗಳೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ಸಂದರ್ಭದಲ್ಲಿ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಿದ ಘಟನೆ ನಡೆಯಿತು.
ಮಂಗಳೂರು ನಗರದ ನೆಹರು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ರಾಜ್ಯೋತ್ಸವದಲ್ಲಿ ಸಚಿವ ಅಂಗಾರ ರವರು ರಾಷ್ಟ್ರ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ರಾಷ್ಟ್ರ ಧ್ವಜ ತಲೆಕೆಳಗಾಗಿ ಹಾರಿದ್ದು, ಬಳಿಕ ಅಧಿಕಾರಿಗಳು ಸರಿಪಡಿಸಿದರು.
ಸಿಬ್ಬಂದಿಗಳ ಎಡವಟ್ಟಿನಿಂದ ರಾಷ್ಟ್ರಧ್ವಜವೂ ತಲೆಕೆಳಗಾಗಿ ಹಾರಿದ್ದು, ತಕ್ಷಣ ಅಧಿಕಾರಿಗಳು ಗಮನಿಸಿ ರಾಷ್ಟ್ರ ಧ್ವಜವನ್ನು ಸರಿಪಡಿಸಿದರು.