ಮಂಗಳೂರು: ಬಿರುವೆರ್ ಕುಡ್ಲ ಬಜಪೆ ಘಟಕದ ಸ್ಪಂದನ ತಂಡದ 65ನೇ ಸೇವಾ ಯೋಜನೆಯಾಗಿ ಹಾಗೂ ಬಿರುವೆರ್ ಕುಡ್ಲ ಸಂಘಟನೆಯ ಸ್ಥಾಪಕ ಅಧ್ಯಕ್ಷರಾದ ಉದಯ ಪೂಜಾರಿ ಯವರ ಮದುವೆಯ ಸವಿನೆನಪಿಗಾಗಿ ಮುತ್ತೂರು, ಕುಪ್ಪೆಪದವು ನಿವಾಸಿ ಕಲ್ಯಾಣಿ ಎಂಬವರ ಮಗಳ ಮದುವೆಗೆ ಸಹಾಯಧನ ನೀಡಲಾಯಿತು.
ಮುತ್ತೂರು ನಿವಾಸಿ ಕಲ್ಯಾಣಿ ಅವರು ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದು, ಇವರಿಗೆ ಎರಡು ಹೆಣ್ಣು ಮಕ್ಕಳು. ಒಬ್ಬಳು ಅಂಗವಿಕಲೆ ಮೊದಲ ಮಗಳ ಮದುವೆಗೆ ಇವರೇ ದುಡಿದು ಮದುವೆ ಮಾಡುವ ಪರಿಸ್ಥಿತಿಯಲ್ಲಿದ್ದಾರೆ. ವಿಧವೆಯಾಗಿರುವ ಇವರು ಅತಿಯಾದ ಬಡತನದಲ್ಲಿ ಜೀವನ ಸಾಗಿಸುತ್ತಿದ್ದು, ಇವರು ಇವರ ಮೊದಲ ಮಗಳ ಮದುವೆಗೆ ಧನಸಹಾಯ ಕೋರಿ ಬಿರುವೆರ್ ಕುಡ್ಲ ಬಜಪೆ ಘಟಕಕ್ಕೆ ಮನವಿಯನ್ನು ನೀಡಿರುತ್ತಾರೆ. ಇದನ್ನು ಗಮನಿಸಿದ ಬಿರುವೆರ್ ಕುಡ್ಲ ಬಜಪೆ ಘಟಕದ ಸ್ಪಂದನ ತಂಡದ ಸದಸ್ಯರು ಬಿರುವೆರ್ ಕುಡ್ಲ ಸಂಘಟನೆಯ ಸ್ಥಾಪಕ ಅಧ್ಯಕ್ಷರಾದ ಉದಯ ಪೂಜಾರಿ ರವರ ಮದುವೆ ದಿನದಂದು ಕಲ್ಯಾಣಿ ಅವರ ಮಗಳ ಮದುವೆಗೆ ಧನಸಹಾಯ ನೀಡಿದ್ದಾರೆ.