ಪುತ್ತೂರು: ಇಲ್ಲಿನ ಚಾರಿತ್ರಿಕ ಸೈಯದ್ ಮಲೆ ಉರುಸ್ ಸಮಾರಂಭದ ಧ್ವಜಾರೋಹಣ, ಭಿತ್ತಿಪತ್ರ ಹಾಗೂ ‘ಸೈಯದ್ ಮಲೆ’ ಸಾಕ್ಷಚಿತ್ರ ಬಿಡುಗಡೆ ಸಮಾರಂಭವು ಇಂದು ಜುಮಾ ನಮಾಝಿನ ಬಳಿಕ ಸೈಯದ್ ಮಲೆ ದರ್ಗಾ ಶರೀಫ್ ವಠಾರದಲ್ಲಿ ನಡೆಯಿತು.
ಸೈಯದ್ ಮಹಮ್ಮದ್ ತಂಞಲ್ ರವರ ನೇತೃತ್ವದಲ್ಲಿ ದರ್ಗಾ ಶರೀಫ್ ನ ಝಿಯಾರತ್ ನಡೆಸಿ ದುಆಃ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸೈಯದ್ ಮಲೆ ಜುಮಾ ಮಸ್ಜಿದ್ ಅಧ್ಯಕ್ಷರಾದ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉರುಸ್ ಸಮಿತಿಯ ಅಧ್ಯಕ್ಷರಾದ ಪುತ್ತು ತ್ ಹಾಜಿ ಬಾಯಾರ್ ಧ್ವಜಾರೋಹಣ ನೆರವೇರಿಸಿದರು. ಸೈಯದ್ ಅಬೂಬಕ್ಕರ್ ತಂಞಲ್ ಕೆಮ್ಮಾಯಿ, ಉರೂಸಿನ ಬಿತ್ತಿ ಪತ್ರವನ್ನು ಬಿಡುಗಡೆಗೊಳಿಸಿದರು.
ಶರಫುದ್ದಿನ್ ತಂಞಲ್ ಸಾಲ್ಮರ ಶುಭ ಹಾರೈಸಿದರು. ಸೈಯದ್ ಮಲೆ ಜುಮ್ಮ ಮಸ್ಜಿದ್ ಖತೀಬರಾದ ಅಲ್ ಹಾಜ್ ಉಮರ್ ದಾರಿಮಿ ಮುಖ್ಯ ಪ್ರಭಾಷಣವನ್ನು ಮಾಡಿದರು. ಅನ್ಸಾರುದ್ದೀನ್ ಜಮಾತ್ ಕಮಿಟಿಯ ನಿಕಟಪೂರ್ವ ಅಧ್ಯಕ್ಷರಾದ ಹಾಜಿ ಯು ಅಬ್ದುಲ್ಲಾ, ಉರೂಸಿನ ಫ್ಲೆಕ್ಸ್ ಬಿಡುಗಡೆಗೊಳಿಸಿದರು.
ಅನ್ಸಾರುದ್ದೀನ್ ರ ಜಮಾತ್ ಕಮಿಟಿಯ ಕೋಶಾಧಿಕಾರಿ ಇಸ್ಮಾಯಿಲ್ ಸಾಲ್ಮರ, ಮಿಸ್ಬಹುಲ್ ಮದರಸದ ಸದರ್ ಮುಲ್ಲಿo, ಅಬ್ದುಲ್ ಬಷೀರ್ ದಾರಿಮಿ ಮಾಡವ್, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಸೈಯದ್ ಮಲೆ ಜುಮಾ ಮಸ್ಜಿದ್ ನಿಕಟಪೂರ್ವ ಅಧ್ಯಕ್ಷರಾದ ಯಯ್ಯ ಹಾಜಿ ಸಾಲ್ಮರ, ಮಾಜಿ ಅಧ್ಯಕ್ಷ ಸುಲೇಮಾನ್ ಹಾಜಿ,ಮಸ್ಜಿದ್ ಉಪಾಧ್ಯಕ್ಷರಾದ ಹುಸೇನ್ ಕೆಎಂಎಫ್, ಕೋಶಾಧಿಕಾರಿ ಮೊಹಮ್ಮದ್ ಕೋಲ್ಪೆ, ಉಮ್ಮರ್ ಫೈಜಿ, ಹೈದರ್ ಇರ್ಫಾನಿ,ಶಾಪಿ ಇರ್ಫಾನಿ, ಇಂಜಿನಿಯರ್ ಆರೀಫ್, ಇಬ್ರಾಹಿಂ ಬಾತಿಷ ಸಾಲ್ಮರ, ಕುವತುಲ್ ಇಸ್ಲಾಂ ಯಂಗ್ಮೆನ್ಸ್ ಅಸೋಶಿಯೇಶನ್ ಅಧ್ಯಕ್ಷರಾದ ಉಸ್ಮಾನ್ ಕೆರೆಮೂಲೆ, ಕಾರ್ಯದರ್ಶಿ ಅಬಿದ್ ಸಾಲ್ಮರ ಮೊದಲಾದವರು ಉಪಸ್ಥಿತರಿದ್ದರು.
ಸೈಯದ್ ಮಲೆ ಜುಮ್ಮ ಮಸ್ಜಿದ್ ಸಹಾಯಕ ಖತೀಬರಾದ ಜಾಫರ್ ಆಸಿಫ್ ಬಾಕವಿ ಮರ್ದಾಳ ಸ್ವಾಗತಿಸಿದರು. ಸೈಯದ್ ಮಲೆ ಜುಮ್ಮಾ ಮಸ್ಜಿದ್ ಪ್ರಧಾನ ಕಾರ್ಯದರ್ಶಿ, ಜುನೈದ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.