ಉಪ್ಪಿನಂಗಡಿ: ನಂದಿನಿ ನಗರ ನಿವಾಸಿ,ದೇವಾಲಯಗಳ ಕಾರ್ಯಕ್ರಮದಲ್ಲಿ ಉದ್ಘೋಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಚೆನ್ನಪ್ಪ(54) ಹೃದಯಾಘಾತದಿಂದಾಗಿ ಡಿ.3 ರಂದು ನಿಧನರಾದರು.
ಚೆನ್ನಪ್ಪ ರವರು ಉಪ್ಪಿನಂಗಡಿಯ ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಮಳೆಗಾಲದ ವೇಳೆ ದ.ಕ. ಜಿಲ್ಲಾಡಳಿತ ನೇಮಿಸುವ ನುರಿತ ಈಜುಗಾರರಲ್ಲಿ ಓರ್ವರಾಗಿದ್ದರು.
ದೇವಸ್ಥಾನಗಳ ಕಾರ್ಯಕ್ರಮಗಳನ್ನು ಆಕರ್ಷಕವಾಗಿ ಉದ್ಘೋಷಣೆ ಮಾಡುತ್ತಿದ್ದುದ್ದರಿಂದ ಎಲ್ಲರಿಗೂ ಚಿರಪರಿಚಿತರಾಗಿದ್ದರು.
ಮೃತರು ತಾಯಿ, ನಾಲ್ವರು ಸಹೋದರರನ್ನು ಹಾಗೂ ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.