ವಿಟ್ಲ: ಇತಿಹಾಸ ಪ್ರಸಿದ್ಧ ಕೇಪು ಶ್ರೀ ಉಳ್ಳಾಲ್ತಿ (ದುರ್ಗಾಪರಮೇಶ್ವರಿ) ಅಮ್ಮನವರ ಸನ್ನಿಧಿಯಲ್ಲಿ ಡಿ.15 ರಂದು ಧ್ವಜಾರೋಹಣಗೊಂಡು ಡಿ.16 ರಂದು “ಕಜಂಬು ಉತ್ಸವ” ನಡೆಯಲಿದೆ.
ಡಿ. 15 ರಂದು ಪೂರ್ವಾಹ್ನ 10 ಗಂಟೆಗೆ ಕಲ್ಲಂಗಳ ಮಹಾದ್ವಾರದಿಂದ ಹೊರಕಾಣಿಕೆ ಮೆರವಣಿಗೆ ನಡೆಯಲಿದೆ. ಡಿ.16 ರಂದು ರಾತ್ರಿ 10 ಗಂಟೆಗೆ ಕೇಪು ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ಕಜಂಬು ಉತ್ಸವ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಡಿ. 23 ರಂದು ಮದ್ಯಾಹ್ನ ಮಲರಾಯಿ ಮತ್ತು ಪಿಲಿಚಾಮುಂಡಿ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಮಕ್ಕಳ ಜಾತ್ರೆ’ ಎಂದೇ ಪ್ರಸಿದ್ಧ ಪಡೆದ ಇತಿಹಾಸ ಪ್ರಸಿದ್ಧ ‘ಕೇಪು ಕಜಂಬು’ ಉತ್ಸವವು ಡಿ.16 ರಂದು ನಡೆಯಲಿದ್ದು, ಕೋವಿಡ್ ನಿಯಮ ಪ್ರಕಾರ, ಸರಕಾರದ ನಿಬಂಧನೆಗಳೊಂದಿಗೆ ಕಜಂಬು ಜಾತ್ರೆ ನಡೆಯಲಿದೆ.
ಜಾತ್ರೆ ಬರುವ ಭಕ್ತಾಧಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಸಹಕರಿಸಿಬೇಕು.. ಹಾಗೆಯೇ ಕಜಂಬು ಜಾತ್ರೆಯಲ್ಲಿ ಸಾರ್ವಜನಿಕರು ಎರಡು ವರ್ಷದ ನಂತರದ ಮಕ್ಕಳನ್ನು ತಂದು ಹರಕೆ ಮಾಡಿಸಿ ಸಹಕರಿಸಿ ಹಾಗೆಯೇ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿ ಎಂದು ಕೃಷ್ಣಯ್ಯ ಕೆ. ಅರಮನೆ ಯವರು ತಿಳಿಸಿದ್ದಾರೆ.