ವಿಟ್ಲ : ಉಪ್ಪಿನಂಗಡಿ ಠಾಣೆಯ ಮುಂಬಾಗ ನಡೆದ ಪ್ರತಿಭಟನೆ, ಗಲಭೆ ಸಂಬಂಧಿತ ನ್ಯೂಸ್ ಲಿಂಕ್ ಶೇರ್ ಮಾಡಿದ್ದ ಮುಡಿಪು ಬ್ಲಾಕ್ ಕಾಂಗ್ರೆಸ್ ವಕ್ತಾರನಿಗೆ ವಿದೇಶದಿಂದ ಜೀವಬೆದರಿಕೆ ಕರೆಗಳು ಬಂದಿರುವ ಬಗ್ಗೆ ಬಂಟ್ವಾಳ ಠಾಣೆಗೆ ದೂರು ನೀಡಿದ್ದಾರೆ.
ಇರಿ ಗ್ರಾಮ ಪಂ. ಸದಸ್ಯರೂ ಮುಡಿಪು ಬ್ಲಾಕ್ ಕಾಂಗ್ರೆಸ್ ವಕ್ತಾರರೂ ಆಗಿರುವ ಇರಾ ಅಬ್ದುಲ್ ರಝಾಕ್ ಐವರ ವಿರುದ್ಧ ದೂರು ದಾಖಲಿಸಿದ್ದಾರೆ.
ಉಪ್ಪಿನಂಗಡಿಯಲ್ಲಿ ನಡೆದ ಗಲಭೆ ಸಂಬಂಧಿತ ನ್ಯೂಸ್ ಲಿಂಕುಗಳನ್ನು ರಝಾಕ್ ಇನ್ನೊಂದು ವಾಟ್ಸಪ್ ಗ್ರೂಪಿಗೆ ಶೇರ್ ಮಾಡಿದ್ದರೆನ್ನಲಾಗಿದೆ.
ಈ ಸಂಬಂಧ ಮೆಲ್ಕಾರ್ ಬೋಗೋಡಿಯ ನಿವಾಸಿ ವಿದೇಶದಲ್ಲಿರುವ ಅಬ್ದುಲ್ ರಝಾಕ್ ಎಂಬಾತ ಇಂಟರ್ ನೆಟ್ ಕಾಲ್ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದು ಈತನ ಜೊತೆ ಕುಕ್ಕಾಜೆ, ಮೆಲ್ಕಾರ್ ಪರಿಸರದ ಇತರ ನಾಲ್ವರು ಶಾಮೀಲಾಗಿದ್ದಾರೆಂದು ಮೊಬೈಲ್ ಸಂಖ್ಯೆಗಳ ಸಹಿತ ದೂರು ನೀಡಿದ್ದಾರೆ.
ದೂರು ದಾಖಲಿಸಿದ ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲಿಡುತ್ತಿದ್ದಾರೆ.