ಬಹು ಬೇಡಿಕೆಯ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂ. ದಿನಬೆಳಗಾದರೆ ಇನ್ ಸ್ಟಾದಲ್ಲಿ ಬರೋ ವಿಡಿಯೋ, ರೀಲ್ಸ್ ಮಾಡೋದೆ ಕೆಲವರಿಗೆ ಹವ್ಯಾಸವಾಗಿಬಿಟ್ಟಿದೆ.
ಇನ್ನು ಅದರಲ್ಲಿನ ಸ್ಟೋರಿಯಲ್ಲಿ ಪೋಸ್ಟ್ ಮಾಡುವ ವಿಡಿಯೋದ ಮಿತಿಯನ್ನು 60 ಸೆಕೆಂಡ್ ಗೆ ವಿಸ್ತರಿಸಿದೆ. ಅಂದ್ರೆ ಪೋಸ್ಟ್ ಮಾಡುವ ಯಾವುದೇ ವಿಡಿಯೋವನ್ನು ಮುಂಚೆ 15 ಸೆಕೆಂಡ್ ಗಳ ಸಮಯದ ಮಿತಿ ಇತ್ತು. ಉಳಿದ ವಿಡಿಯೋವನ್ನು ಮತ್ತೊಂದು ಕ್ಲಿಪ್ ಆಗಿ ಹಾಕಬೇಕಿತ್ತು. ಆದರೆ ಈಗ ಆ ತಲೆ ನೋವಿಲ್ಲ. ಇನ್ನು ಮುಂದೆ ನೀವು ಪೋಸ್ಟ್ ಮಾಡುವ ವಿಡಿಯೋದ ಮಿತಿ ಒಂದು ನಿಮಿಷಕ್ಕೆ ಹೆಚ್ಚಿಸಿದೆ.
ಹೇಗೆ ಗೊತ್ತಾಗುತ್ತೆ..?
- ನಿಮ್ಮ ಇನ್ ಸ್ಟಾಗ್ರಾಂ ಆಪ್ ಅನ್ನು ಅಪ್ಡೇಟ್ ಮಾಡಿ ನಂತರ ಓಪನ್ ಮಾಡಿ.
- ಅಲ್ಲಿ ಮೇಲೆ ಕಾಣಿಸುವ ಯುವರ್ ಸ್ಟೋರಿ ಮೇಲೆ ಕ್ಲಿಕ್ ಮಾಡಿದರೆ ಈ ಹೊಸ ಫೀಚರ್ ಅಪ್ಡೇಟ್ ಆಗಿರುವುದು ಗೊತ್ತಾಗುತ್ತದೆ.
- ಇಲ್ಲಿ ನೀವು ಪೋಸ್ಟ್ ಮಾಡಲು ಬಯಸುವ ಸ್ಟೋರಿ ವಿಡಿಯೋಗಳನ್ನು ಹಾಕಬಹುದು.