ಬೆಳ್ತಂಗಡಿ: ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬ ತನ್ನ ತಾಯಿ ಮತ್ತು ಸಹೋದರರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಕುವೆಟ್ಟು ಗ್ರಾಮದ ಕೊಂಕೋಡಿ ಎಂಬಲ್ಲಿ ನಡೆದಿದೆ.
ಹಲ್ಲೆ ನಡೆಸಿದ ವ್ಯಕ್ತಿಯನ್ನು ಕುವೆಟ್ಟುವಿನ ಕೊಂಕೋಡಿಯ ನಿವಾಸಿ ಸಿರಿಲ್ ಪಿಂಟೋ ಎನ್ನಲಾಗಿದೆ.
ಡಿ. 15 ರಂದು ಆರೋಪಿ ಸಿರಿಲ್ ಅವರ ತಾಯಿ ಫೆಲ್ಸಿ ಮೋನಿಸ್ ಮತ್ತು ಅವರ ಗಾಯಗೊಂಡು ಮಲಗಿದ್ದ ಸಹೋದರ ಹೆನ್ರಿ ಪಿಂಟೊ ಅವರ ಮೇಲೆ ಕತ್ತಿ ಯಿಂದ ಹಲ್ಲೆ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನೂ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿಗೆ ಕರೆದೊಯ್ದು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಆರೋಪಿಯ ಮತ್ತೋರ್ವ ಸಹೋದರ ಜಾನ್ ಪಿಂಟೋ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.