ಪುತ್ತೂರು: ಸಭೆ ಸಮಾರಂಭಗಳಿಗೆ ಉತ್ತಮ ಸೇವೆ ನೀಡುವ ಮೂಲಕ ಶಾಮಿಯಾನ, ಸೌಂಡ್ಸ್‌ಗಳಿಗೆ ಚಿರಪರಿಚಿತವಾಗಿರುವ ಎಂ.ಡಿ.ಎಸ್ ಪಡೀಲ್ ಇದರ ಸ್ಥಾಪಕ ಮೌರೀಸ್ ಡಿ’ಸೋಜ(67)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಫೆ.8ರಂದು ನಿಧನರಾದರು.
ಮೃತರು ಪತ್ನಿ ಜುಲಿಯಾನ ಡಿ’ಸೋಜ, ಪುತ್ರರಾದ ಮೆಟ್ರೀನ್, ಜಸ್ವಿತಾ, ಮೆಲ್ವಿಷಾ, ಪುತ್ರ ಮೆಲೋನೊ, 92 ವರ್ಷ ಪ್ರಾಯದ ತಾಯಿ ಆಲೀಸ್ ಡಿಸೋಜ, ಸಹೋದರರಾದ ಪೀಟರ್ ಡಿಸೋಜ, ಹೆನ್ರಿ, ಲ್ಯಾನ್ಸಿ, ಸಹೋದರಿಯರಾದ ಸಿಸಿಲಿಯಾ, ಸೆಲಿನಾ ರನ್ನು ಅಗಲಿದ್ದಾರೆ.
ಮೌರೀಸ್ ಡಿ’ಸೋಜ ರವರು ಆರಂಭದಲ್ಲಿ ಶಾಮಿಯಾನ ಸಂಸ್ಥೆ ಆರಂಭಿಸಿದ್ದು, ಬಳಿಕ ಧ್ವನಿವರ್ಧಕಗಳನ್ನು ಜೊತೆಗೂಡಿಸಿದ ಅವರು ಸಭೆ ಸಮಾರಂಭಗಳಿಗೆ ಉತ್ತಮ ಸೇವೆಯನ್ನು ಒದಗಿಸುವ ಮೂಲಕ ಪುತ್ತೂರು ಮಾತ್ರವಲ್ಲ ಬೇರೆ ಬೇರೆ ತಾಲೂಕಿನಲ್ಲೂ ಎಂ.ಡಿ.ಎಸ್ ಶಾಮಿಯಾನ ಚಿರಪರಿಚಿತರಾಗುವಂತೆ ಮಾಡಿದ್ದರು.