ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ರೇಡಿಯೋ ಪಾಂಚಜನ್ಯ 90.8FM ನೇತೃತ್ವದಲ್ಲಿ, ಮುಳಿಯ ಫೌಂಡೇಶನ್, ದ ವೆಬ್ ಪೀಪಲ್, ನಿವೃತ್ತ ನೌಕರರ ಸಂಘದ ಸಹಯೋಗದಲ್ಲಿ ಶಿವರಾತ್ರಿ ಪ್ರಯುಕ್ತ ಮಹಾಶಿವನ ಕುರಿತಾದ ವಿವಿಧ ‘ಸಾಂಸ್ಕೃತಿಕ ಸ್ಪರ್ಧೆಗಳು’ zoom ಆನ್ಲೈನ್ ಮುಖಾಂತರ ನಡೆಯಲಿದೆ.
ಫೆ.27 ರಂದು ಬೆಳಿಗ್ಗೆ 9.30 ಕ್ಕೆ ಎಲ್. ಕೆ. ಜಿ ಯಿಂದ 2ನೇ ತರಗತಿ ವರೆಗೆ ಹಾಗೂ 3 ರಿಂದ 7ನೇ ತರಗತಿ ವರೆಗೆ ಶಿವಾರಾಧನಾ ಶ್ಲೋಕ(2ನಿಮಿಷಗಳು) zoom ಆನ್ಲೈನ್ ಮುಖಾಂತರ ನಡೆಯಲಿದೆ.
ಮಾ.1 ರಂದು ಬೆಳಿಗ್ಗೆ 9.30 ರಿಂದ ಶಿವನ ವಿವಿಧ ರೂಪಗಳ ಛದ್ಮವೇಷ ಸ್ಪರ್ಧೆ(1 ರಿಂದ 4ನೇ ತರಗತಿ ವರೆಗೆ ಮತ್ತು 5 ರಿಂದ 10ನೇ ತರಗತಿ ವರೆಗೆ ) ದೇವಸ್ಥಾನ ರಾಜಾಂಗಣದಲ್ಲಿ ನಡೆಯಲಿದೆ.
ನೋಂದಾವಣೆಗಾಗಿ 9353030916, 8494915916, 8050809885 ಸಂಪರ್ಕಿಸ ಬಹುದಾಗಿದೆ.