ಮಂಗಳೂರು: ಇಬ್ಬರು ಬುರ್ಖಾಧಾರಿ ಮಹಿಳೆಯರು ನೈಟಿಗಳನ್ನು ಬುರ್ಖಾದಲ್ಲಿ ಎಗರಿಸಿ ಕಾಲ್ಕಿತ್ತಿರುವ ಘಟನೆ ಮಂಗಳೂರು ಹೊರ ವಲಯದ ತೊಕ್ಕೊಟ್ಟಿನಲ್ಲಿ ನಡೆದಿದೆ.
ತೊಕ್ಕೊಟಿನಲ್ಲಿರುವ ಸ್ಟುಡಿಯೋ ಕಂ ವಸ್ತ್ರಮಳಿಗೆಯೊಂದರಲ್ಲಿ ಈ ಘಟನೆ ನಡೆದಿದ್ದು ಕಳ್ಳಿಯರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತೊಕ್ಕೊಟ್ಟು ಒಳಪೇಟೆಯ ಚರ್ಚ್ ರಸ್ತೆಯಲ್ಲಿರುವ ಮಳಿಗೆಯಲ್ಲಿ ಮಹಿಳಾ ಸಿಬ್ಬಂದಿ ಇದ್ದ ವೇಳೆ ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಬುರ್ಖಾಧಾರಿ ಮಹಿಳೆಯರು ಬಟ್ಟೆ ಖರೀದಿಸುವ ನೆಪದಲ್ಲಿ ಸಿಬ್ಬಂದಿಯನ್ನು ಯಾಮಾರಿಸಿ ಕೈ ಚಳಕ ತೋರಿದ್ದಾರೆ.
ಒಟ್ಟು ಏಳೆಂಟು ನೈಟಿಗಳನ್ನು ಕಪಾಟಿನಿಂದ ತೆಗೆದು ಬುರ್ಖಾದೊಳಗೆ ಇಟ್ಟು ಎಸ್ಕೇಪ್ ಆಗಿದ್ದಾರೆ. ಮಳಿಗೆ ಮಾಲಕರು ಅನುಮಾನಗೊಂಡು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕಳ್ಳಿಯರಿಬ್ಬರು ಕಾಲ್ಕಿತ್ತಿದ್ದು ಕಳ್ಳತನದ ದೃಶ್ಯ ಮಾತ್ರ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.