ಬೆಂಗಳೂರು : ಸಾರಿಗೆ ನೌಕರರ ಬೇಡಿಕೆ ಈಡೇರದ ಹಿನ್ನೆಲೆ ಸಾರಿಗೆ ನೌಕಕರು ಏ.07ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿದ್ದಾರೆ. ಈ ಬಗ್ಗೆ ನೌಕರರ ಕೂಟ ಸರ್ಕಾರಕ್ಕೆ ಮಾಹಿತಿ ನೀಡಿದ್ದು ಸಾರಿಗೆ ಸಚಿವರು, ಅಧಿಕಾರಿಗಳಿಗೂ ತಲುಪಿಸಲಾಗಿದೆ.
ಮಾರ್ಚ್ 16 ರಂದು ಸಾರಿಗೆ ನೌಕರರು ಪ್ರತಿಭಟನೆ ಗಡುವು ಮುಕ್ತಾಯವಾಗಿದ್ದು, ಬೇಡಿಕೆ ಈಡೇರಿಕೆ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಈ ಹಿನ್ನೆಲೆ ಸಾರಿಗೆ ನೌಕಕರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ.