ಬಂಟ್ವಾಳ: ಮನೆಯ ಯಾರೂ ಇಲ್ಲದ ವೇಳೆ ಮನೆಯ ಕಿಟಕಿಯಲ್ಲಿಟ್ಟಿದ್ದ ಕೀ ಅನ್ನು ತೆಗೆದುಕೊಂಡು ಮನೆಗೆ ಪ್ರವೇಶಿಸಿ ಕಪಾಟಿನ ಬೀಗ ಮುರಿದು ಕಪಾಟಿನಲ್ಲಿದ್ದ ಚಿನ್ನಾಭರಣವನ್ನು ಕಳವುಗೈದ ಪ್ರಕರಣ ದಾಖಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಯನ್ನು ಅರಳ ಶುಂಠಿಹಿತ್ಲು ನಿವಾಸಿ ಅಶ್ರಫ್(42) ಎನ್ನಲಾಗಿದೆ.
ಅಶ್ರಫ್ ಜ.31 ರಂದು ಅರಳ ಗ್ರಾಮದ ಪೊರ್ಕಳ ಮನೆಯಲ್ಲಿ ಮನೆಯ ಯಾರೂ ಇಲ್ಲದ ವೇಳೆ ಮನೆಯ ಕಿಟಕಿಯಲ್ಲಿಟ್ಟಿದ್ದ ಕೀ ಅನ್ನು ತೆಗೆದುಕೊಂಡು ಮನೆಗೆ ಪ್ರವೇಶಿಸಿ ಕಪಾಟಿನ ಬೀಗ ಮುರಿದು ಕಪಾಟಿನಲ್ಲಿದ್ದ ಐದುವರೆ ಪವನ್ ತೂಕದ ನೆಕ್ಲೆಸ್ ಅಂದಾಜು ಮೊತ್ತ 2ಲಕ್ಷ ಆಗಿದ್ದು, ಅದನ್ನು ಕಳವುಗೈದಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸೋನವಾಣೆ ಋಷಿಕೇಶ್ ಭಗವಾನ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪ್ರತಾಫ್ ಸಿಂಗ್ ಥೋರಾಟ್ ರವರ ಸೂಚನೆಯಂತೆ ಬಂಟ್ವಾಳ ಗ್ರಾಮಾಂತರ ಠಾಣಾ ನಿರೀಕ್ಷಕರಾದ ಟಿ.ಡಿ. ನಾಗರಾಜ್ ರವರ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ತಂಡ ಭಾಗವಹಿಸಿದ್ದರು.