ಪುತ್ತೂರು: ಬಲ್ನಾಡು ಉಜ್ರ್ಪಾದೆ ಶಿವಪ್ರಸಾದ್ ಭಟ್ ರವರ ಮನೆಯಿಂದ ಫೆ.26 ರಂದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತರನ್ನು ತಾರಿಗುಡ್ಡೆ ಮಹಮ್ಮದ್ ಅಶ್ರಫ್(42), ಸಾಲ್ಮರ ನಿವಾಸಿ ಮೊಹಮ್ಮದ್ ಸಲಾಂ ಎನ್ನಲಾಗಿದೆ.
ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಲ್ನಾಡು ಉಜ್ರುಪ್ಪಾದ ಶಿವಪ್ರಸಾದ್ ಭಟ್ ಇವರ ಮನೆಯಿಂದ ಫೆ.26 ರಂದು ರಾತ್ರಿ ಯಾರೂ ಇಲ್ಲದ ಸಮಯ ಮನೆಯ ಬೀಗವನ್ನು ಮುರಿದು ಸುಮಾರು 160 ಗ್ರಾಂ ಚಿನ್ನಾಭರಣ ಕಳ್ಳತನವಾಗಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದರ ಪತ್ತೆಯ ಬಗ್ಗೆ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರ ವಿಶೇಷ ಪತ್ತೆ ತಂಡವು ಇಬ್ಬರು ಆರೋಪಿಗಳಾದ ಮಹಮ್ಮದ್ ಅಶ್ರಫ್ ಯಾನ ತಾರಿ ಗುಡ್ಡೆ ಅಶ್ರಫ್ ಯಾನೇ ಮನ್ಸೂರ್ ಯಾನೇ ಕಳ್ಳ ಅಶ್ರಫ್ (42), ಹಾಗೂ ಕ. ಮೊಹಮ್ಮದ್ ಸಲಾಂ ಕೆರೆಮೂಲೆ ಮನೆ, ಸಾಲ್ಮರ, ಚಿಕ್ಕಮುನ್ನೂರು ಗ್ರಾಮ, ಪುತ್ತೂರು ತಾಲೂಕು, ಸೈಯದ್ ಮ ಗುಂಪಕಲ್ಲು ಮನೆ, ಸಾಲ್ಮರ ಎಂಬವರನ್ನು ಬಂಧಿಸಿದ್ದು ಈ ಬಗ್ಗೆ ಆರೋಪಿತರನ್ನು ವಿಶೇಷ ಪತ್ತೆ ತಂಡವು ತನಿಖೆ ಮಾಡಿದಾಗ ಇವರು ವಿಟ್ಲ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದ ಅಜ್ಜನಡ್ಕ ಮಹಮ್ಮದ್ ಅಲಿ ಎಂಬವರ ಮನೆ ಕಳ್ಳತನ, ಬಲ್ನಾಡು ಗ್ರಾಮದ ವಿಷ್ಣು ಮೂರ್ತಿ ದೈವಸ್ಥಾನ ಕಳ್ಳತನ ಪ್ರಕರಣ, ಇರ್ದೆ ಶ್ರೀ ವಿಷ್ಣು ಮೂರ್ತಿ ದೇವಸ್ಥಾನ, ಕಾವು ಸಿರಿ ಭೂಮಿ ಕೃಷಿ ಉತ್ಪನ್ನ ಅಂಗಡಿ ಕಳ್ಳತನ, ಉತ್ತರ ಕನ್ನಡ ಜಿಲ್ಲೆ ಭಟ್ಕಳ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣ ಹಾಗೂ ಕೇರಳ ರಾಜ್ಯದ ಕಾಸರಗೋಡು ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಚೆರ್ಕಳ ದಲ್ಲಿ ಎರಡು ಮನ ಕಳ್ಳತನ ಪ್ರಕರಣಗಳ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿತರಿಂದ ಸುಮಾರು 5 ಲಕ್ಷ ಮೌಲ್ಯದ ಚಿನ್ನಾಭರಣ,ಬೆಳ್ಳಿಯ ವಸ್ತುಗಳು, ಲ್ಯಾಪ್ ಟಾಪ್, ಸಿಸಿ ಕ್ಯಾಮರ ಡಿವಿಆರ್ ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಮೋಟಾರು ಸೈಕಲನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಈ ಹಿಂದೆ ಕೇರಳ ಮತ್ತು ಕರ್ನಾಟಕ ರಾಜ್ಯದಲ್ಲಿ ಹಲವು ಮನ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು ಇವರುಗಳ ಮೇಲೆ ಈ ಹಿಂದೆ ಉಪ್ಪಿನಂಗಡಿ ಪೊಲೀಸ್ ಠಾಣೆ, ಸುಳ್ಯ ಪೊಲೀಸ್ ಠಾಣೆ, ಪುತ್ತೂರು ನಗರ ಠಾಣೆ, ಬೆಳ್ಳಾರೆ ಪೊಲೀಸ್ ಠಾಣೆ, ಬಂಟ್ವಾಳ ಪೊಲೀಸ್ ಠಾಣೆ, ಧರ್ಮಸ್ಥಳ ಪೊಲೀಸ್ ಠಾಣೆ, ವಿಟ್ಲ ಪೊಲೀಸ್ ಠಾಣೆ, ಕೇರಳ ರಾಜ್ಯದ ಮಲಪ್ಪುರಂ ಕೊಂಡೆಟ್ಟಿ ಪೊಲೀಸ್ ಠಾಣೆ, ಆದೂರೂ ಪೊಲೀಸ್ ಠಾಣೆ, ಕೊಡಗಿನ ಸೋಮಾವಾರ ಪೇಟೆ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಇವರುಗಳ ಮೇಲೆ ವಾರಂಟ್ ಜ್ಯಾರಿಯಾಗಿದ್ದು ತಲೆಮರೆಸಿಕೊಂಡಿದ್ದು ವಿಶೇಷ ತಂಡವು ಪತ್ತೆ ಮಾಡಿರುತ್ತದೆ.
ಪತ್ತೆ ತಂಡದಲ್ಲಿ ಪೊಲೀಸು ಅಧೀಕ್ಷಕರು ಋಷೀಕೇಶ್ ಸೋನಾವಣೆ ಮತ್ತು ಹೆಚ್ಚುವರಿ ಪೊಲೀಸು ಅದೀಕ್ಷಕರು ಕುಮಾರ ಚಂದ್ರ ರವರ ಮಾರ್ಗದರ್ಶನದಲ್ಲಿ, ಪೊಲೀಸು ಉಪಾಧೀಕ್ಷಕರು ಡಾ. ಗಾನ ಪಿ ಕುಮಾರ್ ಪುತ್ತೂರು ರವರ ನೇತೃತ್ವದಲ್ಲಿ, ಉಮೇಶ್ ಯು, ಪೊಲೀಸು ವೃತ್ತ ನಿರೀಕ್ಷಕರು ಪುತ್ತೂರು ಗ್ರಾಮಾಂತರ ವೃತ್ತ, ಉದಯರವಿ ಎಂ, ಅಮೀನ್ ಸಾಬ್ ಅತ್ತಾರ್ ಪಿಎಸ್‌ಐ ಪುತ್ತೂರು ಗ್ರಾಮಾಂತರ ಠಾಣೆ ರವರ ವಿಶೇಷ ತಂಡದ ಸಿಬಂದಿಗಳಾದ ಎಎಸ್‌ಐ ಮುರುಗೇಶ್, ಶಿವರಾಮ ಗೌಡ, ಧರ್ಣಪ್ಪ ಗೌಡ, ವರ್ಗಿಸ್, ಕೃಷ್ಣಪ್ಪ ಗೌಡ, ದೇವರಾಜ್, ಧರ್ಮಪಾಲ್, ಅದ್ರಾಮ್, ಪ್ರವೀಣ್ ರೈ ಪಾಲ್ತಾಡಿ, ಜಗದೀಶ್ ಅತ್ತಾಜೆ, ಹರ್ಷೀತ್, ಗಿರೀಶ್, ಗುಡದಪ್ಪ ತೋಟದ್, ವಿನೋದ್ ಹಾಗೂ ಮಪಿಸಿ ಗಾಯತ್ರಿ ಮತ್ತು ಜಿಲ್ಲಾ ಗಣಕ ಯಂತ್ರ ವಿಭಾಗದ ಸಂಪತ್ ಮತ್ತು ದಿವಾಕರ ರವರು ಭಾಗವಹಿಸಿರುತ್ತಾರೆ.
ಪ್ರಕರಣ ನಡೆದ ಒಂದೇ ತಿಂಗಳಿನಲ್ಲಿ ಪ್ರಕಣವನ್ನು ಭೇದಿಸಿದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಬಹುಮಾನವನ್ನು ಘೋಷಿಸಿದ್ದಾರೆ.