ಸುಬ್ರಹ್ಮಣ್ಯ: ರಾಜ್ಯದ ಪ್ರಸಿದ್ದ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವಠಾರದ ದೇವಾಲಯದ ಪಾರ್ಕಿಂಗ್ ಜಾಗದಿಂದ ಆಂಜನೇಯ ಗುಡಿಯ ಹಿಂಬಾಗದಿಂದ ಮಲಗಿದ್ದ ದನವನ್ನು ಕಳ್ಳರು ಕದ್ದು ಇನ್ನೋವ ಕಾರಿನಲ್ಲಿ ತುಂಬಿಸಿ ಕದ್ದೊಯ್ಯಲು ಯತ್ನಿಸಿದ ಘಟನೆ ಮಾ 24 ರಾತ್ರಿ ನಡೆದಿದ್ದು, ಘಟನೆಯ ದೃಶ್ಯ ಮಾ.25 ರಂದು ಸಿ ಸಿ ಕ್ಯಾಮರಾ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಇದೀಗ ಸಿ ಸಿ ಕ್ಯಾಮರ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.
ದೃಶ್ಯದಲ್ಲಿ ಕಳ್ಳರ ಕೈಯಿಂದ ಗೋವುಗಳು ತಪ್ಪಿಸಿಕೊಂಡು, ಪ್ರಾಣ ಉಳಿಸಿಕೊಂಡಿದೆ. ಗ್ರಾಮಸ್ಥರು ಗೋ ಕಳ್ಳರ ಹಾವಳಿಗೆ ಬೇಸತ್ತು, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.