ಮಂಗಳೂರು: ಗೆಳೆಯರೊಂದಿಗೆ ಮಾಡಿಕೊಂಡಿದ್ದ ಸಾಲದ ಹೊರೆಯನ್ನು ಹಿಂತಿರುಗಿಸಲಾಗದೆ ಬೇಸತ್ತು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಸುರತ್ಕಲ್‌ನಲ್ಲಿ ನಡೆದಿದೆ.
ಕಾಟಿಪಳ್ಳ ನಿವಾಸಿ ಕ್ಯಾಂಡ್ರಿಕ್ ಲಾರೆನ್ಸ್ ಡಿಸೋಜ (24) ಮೃತಪಟ್ಟ ದುರ್ದೈವಿ.
ಲಾರೆನ್ಸ್ ಡಿಸೋಜ ನಿನ್ನೆ ಡೆತ್‌ನೋಟ್ ಬರೆದಿಟ್ಟು ಮನೆ ಬಿಟ್ಟು ತೆರಳಿದ್ದರು. ಪತ್ರವನ್ನು ನೋಡಿದ ತಾಯಿ ಗಾಬರಿಯಾಗಿ ಹುಡುಕಾಟ ಆರಂಭಿಸಿದರು. ಸುರತ್ಕಲ್ ಪೊಲೀಸರಿಗೂ ಮಾಹಿತಿ ನೀಡಿದ್ದರು.
ಆದರೆ ದುರಾದೃಷ್ಟವಶಾತ್ ಸಂಜೆ ವೇಳೆಗೆ ಸುರತ್ಕಲ್ ಬಳಿಯ ಮಲ್ಲಮಾರ್ ಬೀಚ್‌ನಲ್ಲಿ ಕ್ಯಾಂಡ್ರಿಕ್ ಲಾರೆನ್ಸ್ ಶವ ಪತ್ತೆಯಾಗಿದೆ. ಸುರತ್ಕಲ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.