ವಿಟ್ಲ: ಕಾಶಿಮಠ ಕೊಪ್ಪಳದಲ್ಲಿ ಮನೆ ಹಿಂಭಾಗದ ಮರಕ್ಕೆ ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರನ್ನು ಕಾಶಿಮಠ ಕೊಪ್ಪಳ ನಿವಾಸಿ ಸಂಜೀವ ಶೆಟ್ಟಿ (65) ಎನ್ನಲಾಗಿದೆ.
ರಾತ್ರಿ ಎಂದಿನಂತೆ ಮನೆಯಲ್ಲಿ ಮಲಗಿದ್ದವರು ಬೆಳಗ್ಗೆ ಮನೆಯ ಹೊರಗಿನ ಮರಕ್ಕೆ ನೇಣುಬಿಗಿದುಕೊಂಡಿದ್ದರು. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಪು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನಾಲ್ಕು ಜನ ನಾಲ್ಪೋಳುಗಳ ಪೈಕಿ ಇವರು ಓರ್ವರಾಗಿದ್ದರು.
ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.