ಪುತ್ತೂರು: ಅಪರಿಚಿತ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ ವೆಸಗಿದ ಘಟನೆ ಪುತ್ತೂರು ತಾಲೂಕಿನ ಕಾವು ಸೇತುವೆ ಬಳಿ ನಡೆದಿದೆ.
ಅಪ್ರಾಪ್ತ ಬಾಲಕನೊಬ್ಬ ತನ್ನ ಅಜ್ಜಿ ಜೊತೆ ಸೊಸೈಟಿಗೆ ತೆರಳಿ ಬರುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಬಾಲಕನ ಬಳಿ ಬಂದು ಅಜ್ಜಿ ಮನೆಗೆ ಬಿಡುತ್ತೇನೆ ಬಾ ಎಂದು ಹೇಳಿದ್ದು, ಬಾಲಕ ಬರುವುದಿಲ್ಲ ಎಂದಿದ್ದು, ಆಗ ಬಾಲಕನ ತಂದೆಯ ಹೆಸರು ಹೇಳಿ ಬಾ ನಿನ್ನನ್ನು ಮನೆಗೆ ಬಿಡುತ್ತೇನೆ ಎಂದು ಹೇಳಿ ಒತ್ತಾಯಿಸಿದ್ದಾನೆ.
ಬಾಲಕ ಬೈಕ್ ನಲ್ಲಿ ಕುಳಿತುಕೊಂಡ ನಂತರ ವ್ಯಕ್ತಿಯು ಬೈಕ್ ಅನ್ನು ಈಶ್ವರಮಂಗಲ ಕಡೆಗೆ ಕರೆದುಕೊಂಡು ಹೋಗಿದ್ದು, ಕಾಡಿಗೆ ಕರೆದುಕೊಂಡು ಹೋಗಿ ಬಾಲಕನ ಮೇಲೆ ಅತ್ಯಾಚಾರ ವೆಸಗಿ, ಲೈಂಗಿಕ ದೌರ್ಜನ್ಯ ವೆಸಗಿದ್ದಾನೆ ಎಂದು ಬಾಲಕನ ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅಕ್ರ: 53/2022 ಕಲo: 363, 377, 506, ಐಪಿಸಿ,ಕಲಂ.4 ಪೋಕ್ಸೋ ಪ್ರಕರಣ ದಾಖಲಾಗಿದೆ.