ಪುತ್ತೂರು: ಅಜ್ಜಿಕಲ್ಲು ಶ್ರೀ ಶಕ್ತಿ ಜಠಾಧಾರಿ ಭಜನಾ ಮಂದಿರದ ಜೀರ್ಣೋದ್ದಾರ ಕಾರ್ಯದ ಪ್ರಯುಕ್ತ ಸರ್ಪ ಸಂಸ್ಕಾರ ಹಾಗೂ ಆಶ್ಲೇಷ ಬಲಿ ಪೂಜೆ ಎ.22 ರಂದು ನಡೆಯಿತು.

ಊರಿನ ಸಮಸ್ತ ದೋಷ ಪರಿಹಾರ ನಿವಾರಣೆಗಾಗಿ ಹಾಗೂ ಮಂದಿರದ ಸಾನಿಧ್ಯ ವೃದ್ಧಿಗಾಗಿ ಸರ್ಪ ಸಂಸ್ಕಾರ ಹಾಗೂ ಆಶ್ಲೇಷ ಬಲಿ ಪೂಜಾ ಕಾರ್ಯವನ್ನು ನೆರವೇರಿಸಲಾಯಿತು.
ಊರಿನ ಪ್ರಮುಖರು ಹಾಗೂ ಸಾರ್ವಜನಿಕರು ಸೇವಾ ಕಾರ್ಯದಲ್ಲಿ ಪಾಲ್ಗೊಂಡು ಊರಿನ ಸಮಸ್ತ ದೋಷ ಪರಿಹಾರ ನಿವಾರಣೆಗಾಗಿ ಹಾಗೂ ಮಂದಿರದ ಸಾನಿಧ್ಯ ವೃದ್ಧಿಗಾಗಿ ಪ್ರಾರ್ಥಿಸಿದರು.
