ಪುತ್ತೂರು: ಸುಮಾರು 500 ವರ್ಷಗಳ ಇತಿಹಾಸ ಹೊಂದಿರುವ ಮುಂಡೂರು ಉದಯಗಿರಿ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಪರಿವಾರ ದೈವಗಳ ಜೀರ್ಣೊದ್ದಾರ ಹಾಗೂ ನೂತನ ದೈವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.
ಮುಂಡೂರು ಉದಯಗಿರಿ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಪರಿವಾರ ದೈವಗಳ ಜೀರ್ಣೊದ್ದಾರ ಮಾಡಬೇಕೆಂದು ದೈವಜ್ಞರ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ನೂತನವಾಗಿ ದೈವಸ್ಥಾನ ನಿರ್ಮಾಣ, ಗುಳಿಗನ ಕಟ್ಟೆ, ಕಚೇರಿ, ಕಂಪೌಂಡ್ ಇತ್ಯಾದಿಗಳ ನಿರ್ಮಾಣ ಮಾಡಲು ಸಂಕಲ್ಪಿಸಿದ್ದು, ಅದರ ಮುಂದುವರಿದ ಭಾಗವಾಗಿ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಡಾ. ಹರಿಕೃಷ್ಣ ಪಾಣಾಜೆ ರವರು ನೂತನ ದೈವಸ್ಥಾನಕ್ಕೆ ಕಲ್ಲು ಇಡುವುದರ ಮೂಲಕ ಶಿಲನ್ಯಾಸ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಭಾಸ್ಕರ ಆಚಾರ್ಯ ಹಿಂದಾರು, ಕಾರ್ಯದರ್ಶಿ ಸದಾಶಿವ ಶೆಟ್ಟಿ ಪಟ್ಲ, ಸಮಿತಿ ಸದಸ್ಯರಾದ ಅರುಣ್ ಕುಮಾರ್ ಪುತ್ತಿಲ, ಈಶ್ವರ್ ನಾಯ್ಕ, ಪ್ರಮುಖರಾದ ರಘುನಾಥ ಶೆಟ್ಟಿ, ಅನಿಲ್ ಕಣ್ಣರ್ನೂಜಿ, ವಸಂತ್ ರೈ, ಸೇಸಪ್ಪ ಆಚಾರಿ, ಮೋಹನ, ಧನಂಜಯ, ಸುಧೀರ್ ಶೆಟ್ಟಿ ನೇಸರ, ಮುರಳೀಧರ ಭಟ್ ಬಂಗಾರಡ್ಕ, ಬಾಲಕೃಷ್ಣ ಶೆಟ್ಟಿ ಪಂಜಳ, ದೇವದಾಸ ಕುರಿಯ, ಚಂದ್ರಹಾಸ, ಶಿವಪ್ಪ ಪೂಜಾರಿ ಮುಲಾರು, ಹರೀಶ್ ಉದಯಗಿರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.