ಬಂಟ್ವಾಳ: ಭಿಕ್ಷೆ ಬೇಡಿ ಸಂಗ್ರಹವಾದ ಹಣವನ್ನು ಹಲವು ದೇವಸ್ಥಾನಗಳಿಗೆ ದಾನ ನೀಡುತ್ತಿರುವ ಕುಂದಾಪುರ ಮೂಲದ ವೃದ್ಧೆ ಅಶ್ವತ್ಥಮ್ಮ ಶುಕ್ರವಾರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ 1 ಲಕ್ಷ ರೂ.ಗಳನ್ನು ಅನ್ನದಾನಕ್ಕಾಗಿ ಸಮರ್ಪಿಸಿದರು.
ಕರಾವಳಿ ಭಾಗದ ದೇವಸ್ಥಾನಗಳ ಮುಂದೆ ಭಿಕ್ಷೆ ಬೇಡುವ ವೃತ್ತಿಯ ಈ ವೃದ್ಧೆ ಗಳಿಕೆಯ ಗರಿಷ್ಠ ಮೊತ್ತವನ್ನು ಈಗಾಗಲೇ ಅನೇಕ ದೇವಸ್ಥಾನಗಳಿಗೆ ಅನ್ನದಾನಕ್ಕಾಗಿ ನೀಡಿದ್ದಾರೆ. ಅಯ್ಯಪ್ಪ ಭಕ್ತೆಯಾಗಿರುವ ಅವರು ಅಯ್ಯಪ್ಪ ವ್ರತಧಾರಿಯಾಗಿಯೂ ಭಿಕ್ಷೆ ಬೇಡಿ ಶಬರಿಮಲೆಯ ಪಂಪಾ ಕ್ಷೇತ್ರಕ್ಕೂ ದೇಣಿಗೆ ನೀಡಿದ್ದರು.
ಪೊಳಲಿಯಲ್ಲಿ ಪ್ರಧಾನ ಅರ್ಚಕ ಪಿ. ಮಾಧವ ಭಟ್, ಕಾರ್ಯನಿರ್ವಹಣಾಧಿಕಾರಿ ಪಿ. ಜಯಮ್ಮ, ಸಿಎ ಬ್ಯಾಂಕ್ ಉಪಾಧ್ಯಕ್ಷ ವೆಂಕಟೇಶ ನಾವಡ, ನಾಗೇಶ್ ರಾವ್, ನಾಗೇಶ್ ಪೊಳಲಿ, ನವೀನ್ ದೇಣಿಗೆ ಸ್ವೀಕರಿಸಿದರು.