ಆರ್ಥಿಕ ಬಿಕ್ಕಟ್ಟು, ಉಕ್ರೇನ್-ರಷ್ಯಾ ಯುದ್ಧ ಮುಂತಾದ ಕಾರಣಾಂತರಗಳಿಂದ ಬಂಗಾರ, ಬೆಳ್ಳಿ ದರ ಏರುತ್ತಲೇ ಇದೆ. ದರ ಏರಿಕೆ ಬಿಸಿಯಲ್ಲಿದ್ದ ದೇಶದ ಜನತೆಗೆ ಮತ್ತಷ್ಟು ಬರೆ ಬಿದ್ದಿದೆ.
ಇಂದು ಬಂಗಾರದ ಏರಿಕೆಯಲ್ಲಿ ಮತ್ತೆ 550ರೂಪಾಯಿ ಹೆಚ್ಚಳವಾಗಿದೆ. ಬೆಳ್ಳಿಯಲ್ಲಿ 200ರೂಪಾಯಿ ಏರಿಕೆ ಕಂಡಿದೆ. ಅಕ್ಷಯ ತೃತೀಯದ ಸಂದರ್ಭದಲ್ಲಿ ಚಿನ್ನದ ದರ ಮತ್ತಷ್ಟು ಏರಿಕೆಯಾಗಲಿದೆ ಎನ್ನಲಾಗುತ್ತಿದೆ.
ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.