ಕಿನ್ನಿಗೋಳಿ: ಯಾರೋ ದುಷ್ಕರ್ಮಿಗಳು ನಾಗಬನದಲ್ಲಿದ್ದ 6 ನಾಗನ ಕಲ್ಲುಗಳನ್ನು ಬೇರೆ ಬೇರೆ ಜಾಗದಲ್ಲಿ ಎಸೆದು ವಿಕೃತಿ ಮೆರೆದ ಘಟನೆ ಕಟೀಲು ಮಲ್ಲಿಗೆಯಂಗಡಿಯಲ್ಲಿ ನಡೆದಿದೆ.
ಕಟೀಲು ಮಲ್ಲಿಗೆಯಂಗಡಿಯ ಪಡುಸಾಂತ್ಯ ಭಂಡಾರಿ ಮನೆತನದ ನಾಗಬನದಲ್ಲಿದ್ದ ನಾಗನ ಕಲ್ಲುಗಳನ್ನು ದುಷ್ಕರ್ಮಿಗಳು ಬೇರೆ ಜಾಗದಲ್ಲಿ ಎಸೆದಿದ್ದಾರೆ ಎನ್ನಲಾಗಿದೆ.

ಮನೆತನದ ವ್ಯಕ್ತಿಯೊಬ್ಬರು ಈ ಜಾಗದಲ್ಲಿ ತೆರಳುತ್ತಿದ್ದ ವೇಳೆ ನಾಗನ ಕಲ್ಲು ಆವರಣದಿಂದ ಹೊರಗೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಬಳಿಕ ಪರಿಶೀಲಿಸಿದಾಗ ನಾಗಬನದಲ್ಲಿ ಪ್ರತಿಷ್ಠೆ ಮಾಡಿದ ಜಾಗದಿಂದ 6 ನಾಗನ ಕಲ್ಲುಗಳನ್ನು ಎಸೆದು ಬೇರೆ ಬೇರೆ ಜಾಗದಲ್ಲಿ ಹಾಕಿರುವುದು ಬೆಳಕಿಗೆ ಬಂದಿದೆ.