ಬಂಟ್ವಾಳ: ಕೆದಿಲ ಸತ್ತಿಕಲ್ಲು ವ್ಯಾಪ್ತಿಯ ಹಲವು ಕಡೆಗಳಲ್ಲಿ ಅಕ್ರಮ ಗೋ ಸಾಗಾಟ ಹಾಗು,ಅಕ್ರಮ ಗೋ ಕಸಾಯಿಖಾನೆಗಳು ಹಲವು ವರುಷಗಳಿಂದ ನಡೆಯುತ್ತಿದ್ದು ಹಲವು ಬಾರಿ ಪೋಲೀಸರು ವಶಪಡಿಸಿದ್ದಾರೆ.

ಸತ್ತಿಕಲ್ಲು ಬೈಲು ಬಳಿ ಹಲವು ಸಮಯದಿಂದ ನಡೆಸುತ್ತಿರುವ ಅಕ್ರಮ ಕಸಾಯಿಖಾನೆಗೆ ಹಿಂದು ಜಾಗರಣ ವೇದಿಕೆಯ ಮಾಹಿತಿ ಮೇರೆಗೆ
ಪುತ್ತೂರು ನಗರ ಠಾಣೆಯ ತಂಡ ದಾಳಿ ನಡೆಸಿದ್ದು, ಅಂದಾಜು 70 kg ಗೂ ಹೆಚ್ಚಿನ ಗೋ ಮಾಂಸ ವಶಪಡಿಸಿಕೊಂಡಿದ್ದಾರೆ.ಗೋವನ್ನು ಕಟಾವ್ ಮಾಡುತ್ತಿದ್ದ ಆರೋಪಿ ಸತ್ತಾರ್ ನನ್ನು ಬಂಧಿಸಲಾಗಿದೆ.
ಈ ಅಕ್ರಮ ಕೃತ್ಯವನ್ನು ಹಿಂದುಜಾಗರಣ ವೇದಿಕೆ ಖಂಡಿಸಿದ್ದು, ಹಾಗೂ ಅಪರಾದಿಯನ್ನು ಬಂಧಿಸಿದ ಪೋಲೀಸು ಇಲಾಖೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕೆದಿಲಾ ಗ್ರಾಮದಲ್ಲಿ ನಡೆಯುವ ಇನ್ನೂ ಹೆಚ್ಚಿನ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸುವಂತೆ ಆರಕ್ಷಕರಲ್ಲಿ ಮನವಿ ಮಾಡುತ್ತೇವೆ ಎಂದು ಹಿಂದು ಜಾಗರಣ ವೇದಿಕೆಯ ವಿಟ್ಳ ತಾಲೂಕು ಅಧ್ಯಕ್ಷ ಗಣೇಶ ಕುಲಾಲ್ ಆಗ್ರಹಿಸಿದರು.