ಪುತ್ತೂರು: ಮನೆಯಲ್ಲಿ ಕುಸಿದು ಬಿದ್ದು, ಗಂಭೀರ ಗಾಯಗೊಂಡಿದ್ದ ಕೇಪುಳು ನಿವಾಸಿ ಆನಂದ(28) ರವರು ಮೇ.2 ರಂದು ರಾತ್ರಿ ನಿಧನರಾದರು.

ಕೂಲಿ ಕೆಲಸ ನಿರ್ವಹಿಸುತ್ತಿದ್ದ ಆನಂದ ರವರು, ಮನೆಯಲ್ಲಿ ತಲೆ ತಿರುಗಿ ಬಿದ್ದಾಗ ತಲೆ ಗೋಡೆಗೆ ತಾಗಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ನಿಧನರಾದರು ಎಂದು ತಿಳಿದು ಬಂದಿದೆ.
ಮೃತರು ತಂದೆ, ತಾಯಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.