ಮಂಗಳೂರು: ನಗರದ ಬಲ್ಲಾಳ್‌ಬಾಗ್ ಬಳಿ ನಡೆದಿದ್ದ ಕಾರು ಚಾಲಕನ ಬೇಜಾವಾಬ್ದಾರಿ ಚಾಲನೆಯಿಂದಾಗಿ ಮಹಿಳೆ ಸಾವಿಗೆ ಕಾರಣನಾಗಿದ್ದ ಬಿಎಂಡಬ್ಲ್ಯೂ ಕಾರು ಚಾಲಕ ಶ್ರವಣ ಕುಮಾರ್ ಎಂಬಾತನ ವಿರುದ್ಧ ಇದೀಗ ಕೊಲೆ ಪ್ರಕರಣ ದಾಖಲಾಗಿ ತನಿಖಾ ಹಂತದಲ್ಲಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು ಏ. 9 ರಂದು ಈ ದುರಂತ ಘಟನೆ ನಡೆದಿತ್ತು. ಪ್ರೀತಿ ಮನೋಜ್ ಎಂಬಾಕೆ ಸಾವಿಗೆ ಕಾರಣನಾಗಿದ್ದ ಆರೋಪಿ ವಿರುದ್ಧ ಮೊದಲು ಐಪಿಸಿ 304 ಅಂದರೆ ಪ್ರಾಣಹಾನಿಯಾಗುವ ಬಗ್ಗೆ ಜ್ಞಾನ ಇದ್ದರೂ ಆ ಕೃತ್ಯಕ್ಕೆ ಮುಂದಾಗುವುದು. ಅದರ ಮುಂದುವರಿದ ಭಾಗವಾಗಿ ಐಪಿಸಿ 308 ಅಂದರೆ ಕೊಲೆ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣದಲ್ಲಿ ಆರೋಪಿ ಶ್ರವಣ್‌ಕುಮಾರ್ 8 ದಿನ ನ್ಯಾಯಾಂಗ ಬಂಧನದಲ್ಲಿದ್ದನು. ಚಾಲನ ವೇಳೆ ಆರೋಪಿ ಡ್ರಗ್ಸ್ ಅಥವಾ ಮದ್ಯಪಾನ ಮಾಡಿರುವ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.