ಬೆಂಗಳೂರು: ರಾಜ್ಯದಲ್ಲಿ ಆಜಾನ್ ವರ್ಸಸ್ ಭಜನೆ ವಿವಾದ ಹಿನ್ನೆಲೆ ದೇಗುಲ ಹಾಗೂ ದರ್ಗಾಗಳಲ್ಲಿ ಲೌಡ್ ಸ್ಪೀಕರ್ ಅಳವಡಿಕೆಗೆ ಮಾರ್ಗಸೂಚಿ ಪ್ರಕಟವಾಗಿದೆ. ಧ್ವನಿವರ್ಧಕ ಬಳಕೆಗೆ ಹಾಗೂ ಡೆಸಿಬಲ್ ಮಿತಿಯನ್ನು ಸೂಚಿಸಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಲೌಡ್ ಸ್ಪೀಕರ್ ಸದ್ದಿಗೆ ಮಾರ್ಗಸೂಚಿ..
- ಕೈಗಾರಿಕಾ ಪ್ರದೇಶದಲ್ಲಿ ಬೆಳಗ್ಗೆ 75 ಡೆಸಿಬಲ್ ರಾತ್ರಿ 70 ಡೆಸಿಬಲ್ ಸದ್ದು ಇರಬೇಕು.
- ವಾಣಿಜ್ಯ ಪ್ರದೇಶದಲ್ಲಿ ಬೆಳಗ್ಗೆ 65 ಡೆಸಿಬಲ್ ಹಾಗೂ ರಾತ್ರಿ 55 ಡೆಸಿಬಲ್ ಇರಬೇಕು.
- ಜನವಸತಿ ಪ್ರದೇಶದಲ್ಲಿ ಬೆಳಗ್ಗೆ 55 ಇದ್ರೆ ರಾತ್ರಿ 45 ಡೆಸಿಬಲ್ ಇರಬೇಕು. ನಿಶ್ಶಬ್ಧ ವಲಯದಲ್ಲಿ ಬೆಳಗ್ಗೆ 50 ಇದ್ರೆ ರಾತ್ರಿ 40 ಡೆಸಿಬಲ್ ಇರಬೇಕು.
- ಧ್ವನಿವರ್ಧಕ ಬಳಕೆಗೆ 15 ದಿನಗಳಲ್ಲಿ ಅನುಮತಿ ಪಡೆದಿರಬೇಕು. ಇಲ್ಲದಿದ್ರೆ ಸ್ಪೀಕರ್ ತೆಗೆಯುವಂತೆ ಸರ್ಕಾರ ಆದೇಶಿಸಿದೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಲಾಗಿದ್ದು, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೂ ಧ್ವನಿವರ್ಧಕ ಬಳಸುವಂತಿಲ್ಲ ಅಂತ ಸರ್ಕಾರ ಆದೇಶಿಸಿದೆ.