ಪುತ್ತೂರು : ನಾಡಿನ ಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್ನ ಪ್ರತಿಷ್ಠಿತ ‘ಮುಳಿಯ ಚಿನ್ನೋತ್ಸವ’ – ವೆರೈಟಿ ವಿನ್ಯಾಸದ ಚಿನ್ನಾಭರಣಗಳ ಹಬ್ಬ ಮೇ16 ರಿಂದ ಜೂನ್ 4 ರವರೆಗೆ ನಡೆಯಲಿದೆ.
ಈ ಉತ್ಸವದಲ್ಲಿ ವಿವಿಧ ವಿನ್ಯಾಸಗಳ ಮನಸಿಗೊಪ್ಪುವ ಅಂದದ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
ಉತ್ಸವದಲ್ಲಿ ಪ್ರತಿದಿನ ಚಿನ್ನದ ನಾಣ್ಯ ಗೆಲ್ಲುವ ಮತ್ತು ಪ್ರತಿ 2 ಗಂಟೆಗೊಮ್ಮೆ ಬೆಳ್ಳಿ ನಾಣ್ಯ ಗೆಲ್ಲುವ ಅವಕಾಶವಿದೆ. ಮುಳಿಯ ಚಿನ್ನಾಭರಣ ಮಳಿಗೆಗೆ ಭೇಟಿ ನೀಡಿ ಪ್ರದರ್ಶನ ವೀಕ್ಷಿಸುವ ಗ್ರಾಹಕರಿಗೂ (ವಾಕ್ ಇನ್) ವಿಶೇಷ ಬಹುಮಾನ ಗೆಲ್ಲುವ ಅವಕಾಶವನ್ನು ಮುಳಿಯ ಸಂಸ್ಥೆ ಈ ಬಾರಿಯ ಚಿನ್ನೋತ್ಸವದಲ್ಲಿ ಒದಗಿಸುತ್ತಿದೆ.
ಈ ಬಾರಿಯ ಚಿನ್ನೋತ್ಸವದಲ್ಲಿ ಹೊಸ ಟ್ರೆಂಡಿ ವಿನ್ಯಾಸಗಳ ಅನಾವರಣಗೊಳ್ಳಲಿದ್ದು, ಪ್ರದರ್ಶನ ಮಾರಾಟ ನಡೆಯಲಿದೆ. ಜೊತೆಗೆ ಪಾರಂಪರಿಕ ಹಾಗೂ ದೇಶ ವಿದೇಶದ ಆಭರಣಗಳ ಆಯ್ಕೆಯ ಅವಕಾಶವೂ ಇದೆ.