ಡೆಹ್ರಾಡೂನ್: ವರ್ಷದೊಳಗೆ ನಮ್ಮ ಕೈಗೆ ಮೊಮ್ಮಗು ಕೊಡಿ. ಇಲ್ಲವಾದರೆ 5 ಕೋಟಿ ರೂ. ಪರಿಹಾರ ಕೊಡಿ’ ಹೀಗೆಂದು ಉತ್ತರಾಖಂಡದ ತಾಯಿಯೊಬ್ಬರು ತಮ್ಮ ಮಗ-ಸೊಸೆಯ ವಿರುದ್ಧವೇ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಹರಿದ್ವಾರದ ಎ.ಕೆ.ಶ್ರೀವಾಸ್ತವ್ ಅವರ ಪತ್ನಿ ಈ ರೀತಿ ನ್ಯಾಯಾಲಯ ಮೆಟ್ಟಿಲೇರಿದವರು. “ಮಗನನ್ನು ಕಷ್ಟ ಪಟ್ಟು ಓದಿಸಿದ್ದೇವೆ. ವಿದೇಶದಲ್ಲಿ ತರಬೇತಿ ಕೊಡಿಸಿ ಪೈಲಟ್ ಮಾಡಿಸಿದ್ದೇವೆ. 2016ರಲ್ಲಿ ಮದುವೆ ಮಾಡಿಸಿ, ಅವರದ್ದೇ ಖರ್ಚಿನಲ್ಲಿ ಥೈಲೆಂಡ್‌ಗೆ ಹನಿಮೂನ್ ಕೂಡ ಕಳುಹಿಸಿಕೊಟ್ಟಿದ್ದೇವೆ. ಆದರೆ ಮದುವೆಯಾದ ಮೇಲೆ ಅವನು ಹೆಂಡತಿ ಮಾತಿನಂತೆ ಹೈದರಾಬಾದ್‌ಗೆ ಸ್ಥಳಾಂತರಗೊಂಡಿದ್ದಾನೆ.
ಅಲ್ಲಿಗೆ ಹೋದಾಗಿನಿಂದ ನಮ್ಮೊಂದಿಗೆ ಹೆಚ್ಚು ಸಂಪರ್ಕದಲ್ಲೂ ಇಲ್ಲ ಹಾಗೆಯೇ ಹೆಂಡತಿಯ ಮಾತಿನಂತೆಯೇ ನಡೆದುಕೊಳ್ಳುತ್ತಾನೆ. ನಾವು ಅವನಿಗಾಗಿ ನಮ್ಮೆಲ್ಲ ಆಸ್ತಿ ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿದ್ದೇವೆ. ಈಗ ನಮಗೆ ವರ್ಷದೊಳಗೆ ಮೊಮ್ಮಗು ಬೇಕು ಇಲ್ಲವೇ ಮಗ ಸೊಸೆ ಇಬ್ಬರೂ ತಲಾ 2.5 ಕೋಟಿ ರೂ. ಪರಿಹಾರ ಕೊಡಬೇಕು’ ಎಂದು ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.