ಚೈಲ್ಡ್ ಲೈನ್-1098(ಮಕ್ಕಳ ಸಹಾಯವಾಣಿ-1098), ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಯಾಗಿದ್ದು ರಕ್ಷಣೆ ಮತ್ತು ಪೋಷಣೆಯ ಅಗತ್ಯತೆಯಲ್ಲಿ ಇರುವ ಮಕ್ಕಳಿಗಾಗಿ ದಿನದ ಇಪ್ಪತ್ತನಾಲ್ಕು ಗಂಟೆ 7 ತಾಸುಗಳ ಉಚಿತ, ತುರ್ತು ದೂರವಾಣಿ ಹಾಗೂ ಹೊರಸಂಪರ್ಕ ಸೇವೆಯ ಜೊತೆಗೆ ಚೈಲ್ಡ್ ಲೈನ್ ಅಂಚಿನಲ್ಲಿರುವ ಮಕ್ಕಳಿಗೆ ಆಘಾತಕಾರಿ ಪರಿಸ್ಥಿತಿಗಳಿಂದ ರಕ್ಷಣೆ ಮತ್ತು ಪುನರ್ವಸತಿ ಸೇವೆಯನ್ನು ಒದಗಿಸಿಕೊಡುವಲ್ಲಿ ಕಾರ್ಯಪ್ರವೃತ್ತವಾಗಿದೆ. ವರುಷದ ಮೇ ತಿಂಗಳನ್ನು ಮಕ್ಕಳ ಸಹಾಯವಾಣಿ-1098 ಮಾಸಾಚಾರಣೆಯಾಗಿ ಆಚರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ದ.ಕ.ಜಿಲ್ಲೆ, ಜಿಲ್ಲಾಮಕ್ಕಳ ರಕ್ಷಣಾ ಘಟಕ ದ.ಕ.ಜಿಲ್ಲೆ ಹಾಗೂ ಚೈಲ್ಡ್ ಲೈನ್-1098 ದ.ಕ ಜಿಲ್ಲೆ ನೇತೃತ್ವದಲ್ಲಿ ಮೇ.17 ರಂದು ಮಕ್ಕಳ ಸಹಾಯವಾಣಿ ದಿನಾಚರಣೆಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಉದ್ಘಾಟಕರಾಗಿ ದಕ್ಷಿಣ ಕನ್ನಡ ಜೆಲ್ಲೆಯ ಅಪರ ಜಿಲ್ಲಾಧಿಕಾರಿಯವರಾದ ಕೃಷ್ಣಮೂರ್ತಿ.ಹೆಚ್.ಕೆ(ಭಾಆಸೇ) ಆಗಮಿಸಿ ಚೈಲ್ಡ್ ಲೈನ್ ಮಾಹಿತಿಫಲಕವನ್ನ ಬಿಡುಗಡೆಗೊಳಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಮಕ್ಕಳ ತುರ್ತು ರಕ್ಷಣೆ ಹಾಗೂ ಪೋಷಣೆಗಾಗಿ, ಹಾಗೆಯೇ ಅಪ್ರಾಪ್ತ ವಯಸ್ಸಿನ ಮಕ್ಕಳು ಯಾವುದೇ ದೌರ್ಜನ್ಯಕ್ಕೆ ಒಳಗಾದಲ್ಲಿ ಸಾರ್ವಜನಿಕರು 1098ಕ್ಕೆ ಕರೆಮಾಡಿ ಮಾಹಿತಿಯನ್ನು ನೀಡಬಹುದು ಜೊತೆಗೆ ಮಕ್ಕಳ ರಕ್ಷಣೆ ಹಾಗೂ ಯಾವುದೇ ಮಗು ತನ್ನ ಹಕ್ಕುಗಳಿಂದ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆ ಹಾಗೂ ಜವಬ್ಧಾರಿ, ಸಮಾಜದ ಯಾವುದೇ ಮಗುವು ದೌರ್ಜನ್ಯಕ್ಕೆ, ಹಿಂಸೆಗೆ ಒಳಗಾಗದಂತೆ ಸಾರ್ವಜನಿಕರಿಗೆ ಅರಿವನ್ನು ಮೂಡಿಸಬೇಕಾಗಿ ತಿಳಿಸಿದರು.
ದ.ಕ.ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ರೆನ್ನಿ ಡಿಸೋಜರವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು, ಮಂಗಳೂರಿನ ರಾಯಲ್ ಎನ್ಪೀಲ್ಡ್ ರವರಿಂದ ಬೈಕ್ ರಾಲಿ ಹಾಗೂ ಮಹಿಂದ್ರಾ ಕಂಪೆನಿಯವರಿಂದ ಜೀಪ್ ರಾಲಿ, ಜೊತೆಗೆ ಮಂಗಳೂರಿನ ಸ್ಕೂಲ್ ಆಪ್ ಸೋಶಿಯಲ್ ವರ್ಕ್ ರೋಶಿನಿ ನಿಲಯದ ವಿಧ್ಯಾರ್ಥಿಗಳಿಂದ ಮಕ್ಕಳ ದೌರ್ಜನ್ಯ ತಡೆಗಾಗಿ 1098 ರ ವಿಷಯದಲ್ಲಿ ಬೀದಿನಾಟಕ ಗಳನ್ನು ಆಯೋಜಿಸಲಾಗಿತ್ತು, ಮಕ್ಕಳ ಪಾಲನಾ ಸಂಸ್ಥೆಯ ಮಕ್ಕಳು ಹಾಗೂ ಕಾಲೇಜು ವಿಧ್ಯಾರ್ಥಿಗಳಿಂದ, ವಿವಿಧ ಸಂಸ್ಥೆಗಳ ಮೇಲ್ಷಿಚಾರಕರಿಂದ, ಜಿಲ್ಲಾಧಿಕಾರಿಯವರ ಕಚೇರಿಯ ಮುಂಭಾಗದಿಂದ ನಗರದ ಟೌನ್ ಹಾಲ್ ವರೆಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಗೌರ್ವಾನ್ವಿತ ಅಪರಜಿಲ್ಲಾಧಿಕಾರಿ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅತಿಥಿಗಳನ್ನು ಜಿಲ್ಲಾಮಕ್ಕಳ ರಕ್ಷಣಾ ಘಟಕ ದ.ಕ.ಜಿಲ್ಲೆಯ ಜಿಲ್ಲಾಮಕ್ಕಳ ರಕ್ಷಣಾಧಿಕಾರಿಯವರಾದ ಯಮುನಾ ರವರು ಸ್ವಾಗತಿಸಿದರು, ಸಂಸ್ಥೆಯ ಕಾರ್ಯಕ್ರಮ ಪ್ರಬಂಧಕರಾದ ಕು.ಪ್ರಾರ್ಥನಾ ನಿರೂಪಿಸಿದರು, ಚೈಲ್ಡ್ ಲೈನ್-1098 ರ ಕೇಂದ್ರ ಸಂಯೋಜಕರಾದ ದೀಕ್ಷಿತ್ ಅಚ್ರಪ್ಪಾಡಿಯವರು ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಚೈಲ್ಡ್ ಲೈನ್ 1098 ನಗರ ಸಮಯೋಜಕರಾದ ಲವಿಟಾ ಡಿಸೋಜ ಮತ್ತು ಚೈಲ್ಡ್‌ಲೈನ್ ಸಿಬ್ಬಂದಿಗಳು, ಜಿಲ್ಲಾಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು, ಪೊಲೀಸ್ ಇಲಾಖಾ ಸಿಬ್ಬಂದಿಯವರು, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು, ಮಕ್ಕಳ ಪಾಲನಾ ಸಂಸ್ಥೆಯ ಮೇಲ್ವಿಚಾರಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.