ಬಂಟ್ವಾಳ: ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದ ಯುವಕನಿಗೆ ಮೂವರು ಯುವಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಮಾರಿಪಳ್ಳ ಕಡೆಗೋಳಿ ಬಳಿ ನಡೆದಿದೆ.
ಗಾಯಗೊಂಡ ಯುವಕನನ್ನು ತುಂಬೆ ರೊಟ್ಟಿಗುಡ್ಡೆ ನಿವಾಸಿ ನಫೀಲ್ (18) ಎನ್ನಲಾಗಿದೆ.
ನಫಿಲ್ ಕೂಲಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ವೇಳೆ ಫೋನ್ ಬಂದ ಕಾರಣ ಮಾರಿಪಳ್ಳ ಕಡೆಗೋಳಿ ಬಳಿ ಬೈಕ್ ನಿಲ್ಲಿಸಿ ಮಾತನಾಡುತ್ತಿದ್ದ ವೇಳೆ ಮೂರು ಜನ ಯುವಕರು ಬಂದು ಮೊಬೈಲ್ ಎಳೆಯಲು ನೋಡಿ ನಮ್ಮ ಏರಿಯಾದಲ್ಲಿ ಇಷ್ಟು ಹೊತ್ತಿಗೆ ನಿನಗೆ ಏನೂ ಕೆಲಸ ಎಂದು ಹೇಳಿ ಅಂಗಿಯನ್ನು ಹಿಡಿದು ಅಲ್ಲಿಯೇ ಇದ್ದ ಅಂಗಡಿಯೊಂದರ ಬಳಿಗೆ ಕರೆದುಕೊಂಡು ಹೋಗಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ಬೈದು, ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆ ನಡೆಸಿದ ಮೂವರೂ ಯುವಕರು ತುಳುವಿನಲ್ಲಿ ಬೈಯುತ್ತಿದ್ದು, ಅದೇ ಪರಿಸರದವರಾಗಿದ್ದು, ಮುಂದಕ್ಕೆ ನೋಡಿದರೆ ಗುರುತಿಸುತ್ತೇನೆ. ಮೂರೂ ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ನಫಿಲ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಕ್ರ 34/2022 ಕಲಂ 504, 506, 323, 324 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.