ಪುತ್ತೂರು: ಕಳೆದ 37 ವರ್ಷಗಳಿಂದ ಮುರದಲ್ಲಿ ಕಾರ್ಯಾಚರಿಸುತ್ತಿದ್ದ ಅಬ್ದುಲ್ ರಹಿಮಾನ್ ರವರ ಮಾಲೀಕತ್ವದ ಖಲಂದರಿಯ ರೆಸ್ಟೋರೆಂಟ್ ಸ್ಥಳಾಂತರಗೊಂಡು ಬೊಳುವಾರು ಇನ್ ಲ್ಯಾಂಡ್ ಮಯೂರದ ಪ್ರಥಮ ಮಹಡಿಯಲ್ಲಿ ಮೇ.16 ರಂದು ಶುಭಾರಂಭಗೊಂಡಿತು.

ಧರ್ಮಗುರು ಅಸಯ್ಯದ್ ಫಝಲ್ ಕೋಯಮ್ಮ ಕೂರತ್ ವಿನೂತನ ರೆಸ್ಟೋರೆಂಟ್ ಮಳಿಗೆಗೆ ಶುಭ ಹಾರೈಸಿದರು.

ಸಿವಿಲ್ ಇಂಜಿನಿಯರ್ ಸನದ್ ಯೂಸುಫ್ ಪುತ್ತೂರು, ಸಿವಿಲ್ ಇಂಜಿನಿಯರ್ ನೌಫಲ್ ನೆಕ್ಕಿಲಾಡಿ, ಶಮೀಮ್ ಮೊಹಮ್ಮದ್ ಪುತ್ತೂರು ಸಹಿತ ಹಲವರು ಭೇಟಿ ನೀಡಿ ಶುಭ ಹಾರೈಸಿದರು.
ವಾರದ ಎಲ್ಲಾ ದಿನಗಳಲ್ಲೂ ಬೆಳಗ್ಗೆ 6 ರಿಂದ ಸಂಪೂರ್ಣ ಊರ ಶೈಲಿಯ ಶುಚಿ ರುಚಿಯಾದ ಮಾಂಸಾಹಾರಿ ಹಾಗೂ ಸಸ್ಯಾಹಾರಿ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ, ಸಂಜೆಯ ಉಪಹಾರಗಳು ಮಿತದರದಲ್ಲಿ ಎಂದು ಸಂಸ್ಥೆಯ ಮಾಲಕರು ಪ್ರಕಟಣೆ ತಿಳಿಸಿದ್ದಾರೆ.
