ಸುಬ್ರಹ್ಮಣ್ಯ: ಕಟ್ಟಡ ಮಾಲೀಕನೊಬ್ಬ ಹೋಟೆಲ್ ಮಾಲಕಿಯೊಬ್ಬರ ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಠಾಣೆಗೆ ದೂರು ನೀಡಿದ ಘಟನೆ ಕೊಲ್ಲಮೊಗ್ರದಲ್ಲಿ ನಡೆದಿದೆ.
ಕೊಲ್ಲಮೊಗ್ರದ ಟಿ.ಎಂ ಮೊಹಮ್ಮದ್ ಎಂಬಾತನ ವಾಣಿಜ್ಯ ಕಟ್ಟಡದಲ್ಲಿ ಮಹಿಳೆಯೊಬ್ಬರು ಹೋಟೆಲ್ ಒಂದನ್ನು ನಡೆಸುತ್ತಿದ್ದು, ನಿನ್ನೆ ಆರೋಪಿತ ಮೊಹಮ್ಮದ್ ಹೋಟೆಲ್ ಗೆ ಆಗಮಿಸಿದ್ದ ಎನ್ನಲಾಗಿದೆ.
ಹೋಟೆಲ್ ಆಗಮಿಸಿದ ಆತ ಚಹಾ ಕೇಳಿದ್ದು, ಮಾಲಕಿ ಚಹಾ ನೀಡುವಾಗ ಕೈ ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಹಿಳೆ ಸುಬ್ರಹ್ಮಣ್ಯ ಠಾಣೆಯಲ್ಲಿ ಮೊಹಮ್ಮದ್ ವಿರುದ್ಧ ದೂರು ದಾಖಲಿಸಿದ್ದು, ಮಹಿಳೆಯ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.