ಪುತ್ತೂರು: ಹುಚ್ಚು ನಾಯಿಯೊಂದು ನಗರ ಸಭಾ ಸದಸ್ಯ ಶಿವರಾಮ್ ಸಪಲ್ಯ ಸಹಿತ 10ಕ್ಕೂ ಅಧಿಕ ಮಂದಿದ ಕಚ್ಚಿದ ಘಟನೆ ಪುತ್ತೂರು ನಗರದ ಬೊಳ್ವಾರು ರಸ್ತೆಯಲ್ಲಿ ನಡೆದಿದೆ.

ಉರ್ಲಾಂಡಿಯಲ್ಲಿ ದಾರಿಯಲ್ಲಿ ತೆರಳುತ್ತಿದ್ದ ಸಾರ್ವಜನಿಕರಿಗೆ ಹುಚ್ಚು ನಾಯಿ ಕಡಿದಿದ್ದು, ಗಾಯಗೊಂಡವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸಾರ್ವಜನಿಕರಿಗೆ ಕಚ್ಚಿ ಹಾನಿಯುಂಟು ಮಾಡಿದ ಹುಚ್ಚು ನಾಯಿಯನ್ನು ಹಿಡಿಯಲು ತೆರಳಿದ್ದ ವೇಳೆ ನಗರಸಭೆ ಸದಸ್ಯ ಶಿವರಾಮ್ ಸಪಲ್ಯ ರವರಿಗೆ ನಾಯಿ ಕಡಿದಿದ್ದು, ಹಲವರಿಗೆ ಹಾನಿಯುಂಟು ಮಾಡಿದ ನಾಯಿಯನ್ನು ಕೊನೆಗೂ ನಗರಸಭೆ ಸದಸ್ಯ ಶಿವರಾಮ ರವರು ಸಾಯಿಸಿದ್ದಾರೆ ತಿಳಿದು ಬಂದಿದೆ..