ಕಾಸರಗೋಡು: ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣದ ಆರೋಪಿಗಳನ್ನು ಜೈಲಿನಲ್ಲೇ ವಿಚಾರಣೆ ನಡೆಸಲು ಸಿ.ಬಿ.ಐ. ಗೆ ನ್ಯಾಯಾಲಯ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ 11 ಆರೋಪಿಗಳನ್ನು ಸಿ.ಬಿ.ಐ. ಶೀಘ್ರ ವಿಚಾರಣೆ ನಡೆಸಲಿದೆ.
ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನ ವಿಚಾರಣೆ ನಡೆಸಲು ಅನುಮತಿ ಕೋರಿ ಸಿ.ಬಿ.ಐ. ಎರ್ನಾಕುಲಂ ಸಿಜೆಎಂ ನ್ಯಾಯಾಲಯ ಮೊರೆ ಹೋಗಿತ್ತು. ಪ್ರಕರಣದಲ್ಲಿ ಸಿಪಿಎಂ ಸ್ಥಳೀಯ ಸಮಿತಿ ಮುಖಂಡ ಎ. ಪೀತಾಂಬರ ನ್ ಪ್ರಮುಖ ಆರೋಪಿಯಾಗಿದ್ದು, ಈತ ಸೇರಿದಂತೆ 11 ಮಂದಿಯಿಂದ ಮಾಹಿತಿ ಕಲೆ ಹಾಕಲಿದೆ.
ಆರೋಪಕ್ಕೆ ಗುರಿಯಾಗಿ ಇದೀಗ ಜಾಮೀನು ನಲ್ಲಿ ಬಿಡುಗಡೆಗೊಂಡಿರುವ ಸಿಪಿಎಂ ವಲಯ ಸಮಿತಿ ಕಾರ್ಯದರ್ಶಿ ಹಾಗೂ ಕಾಞ0ಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಪ ಮಣಿಕಂಠ, ಸಿಪಿಎಂ ಸ್ಥಳೀಯ ಮುಖಂಡ ಎನ್. ಬಾಲಕೃಷ್ಣನ್ ಮೊದಲಾದವರನ್ನು ಈಗಾಗಲೇ ಸಿ.ಬಿ.ಐ. ವಿಚಾರಣೆ ನಡೆಸಿದೆ. 2019 ರ ಫೆಬ್ರವರಿ 17 ರಂದು ಪೆರಿಯದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ರನ್ನು ಕೊಲೆಗೈಯ್ಯಲಾಗಿತ್ತು.





























