ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವುದಕ್ಕಾಗಿ ರಚಿಸಲಾಗಿರುವ ಎನ್ ಕೌಂಟರ್ ತಂಡದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಸದಸ್ಯರಾಗಿದ್ದಾರೆ.
ಸಬ್ ಇನ್ಸ್ ಪೆಕ್ಟರ್ ಪ್ರಿಯಾಂಕ ಎನ್ ಕೌಂಟರ್ ತಂಡದಲ್ಲಿ ಕಾರ್ಯಾಚರಿಸುತ್ತಿದ್ದಾರೆ. ದೆಹಲಿ ಪ್ರಗತಿ ಮೈದಾನದ ಬಳಿ ಶೂಟೌಟ್ ನಲ್ಲಿ ಪ್ರಿಯಾಂಕ ಭಾಗವಹಿಸಿದ್ದರು. ದುಷ್ಕರ್ಮಿಯೊಬ್ಬ ಈ ವೇಳೆ ಪ್ರಿಯಾಂಕ ಮೇಲೆ ಗುಂಡಿನ ದಾಳಿ ನಡೆಸಿದ್ದ. ಪ್ರಿಯಾಂಕ ಅಪಾಯದಿಂದ ಪಾರಾಗಿದ್ದರು. ಬಳಿಕ ಕ್ರಿಮಿನಲ್ ಮತ್ತು ಆತನ ಓರ್ವ ಸಹಚರನನ್ನು ಬಂಧಿಸುವಲ್ಲಿ ಪ್ರಿಯಾಂಕ ನೇತೃತ್ವದ ತಂಡ ಯಶಸ್ವಿಯಾಗಿತ್ತು.