ರಾತ್ರಿ ಹೊತ್ತು ನಿದ್ದೆ ಮಾಡೋಕೆ ಕೆಲವರಿಗೆ ತುಂಬಾ ಸುಲಭ. ಆದರೆ ಮತ್ತೆ ಕೆಲವರಿಗೆ ನಿದ್ದೆ ಮಾಡೋಕೆ ಮನಸಿದ್ರು ನಿದ್ದೆ ಬರಲ್ಲ. ಅಂತವರಿಗಾಗಿಯೇ ಈ ಟಿಪ್ಸ್. ದಿನಕ್ಕೆ 2 ಟಿಪ್ಸ್ ನಂತೆ ಅನುಸರಿಸಿದ್ರೂ ನೀವು ಸ್ವಲ್ಪ ಹೊತ್ತಿಗೆ ನಿದ್ದೆಗೆ ಜಾರಬಹುದಾಗಿದೆ.
ಹಾಡು ಕೇಳಿ: ಹಾಸಿಗೆ ಮೇಲೆ ಮಲಗಿಯೇ ನಿಮ್ಮಿಷ್ಟದ ಹಾಡುಗಳನ್ನು ಕೇಳಿದರೆ ಸ್ವಲ್ಪ ಹೊತ್ತಿಗೆ ನಿದ್ದೆ ಬರುತ್ತದೆ. ಆದಷ್ಟು ನಿದ್ದೆ ಜಾರಲು ಪ್ರೇರೇಪಿಸುವ ಮೆಲೋಡಿ ಸಾಂಗ್ಸ್ ಕೇಳಿ. ಮನೆ ಕೆಲಸ ಮಾಡಿ: ನಿಮ್ಮ ರೂಮ್ ನಲ್ಲಿರುವ ನಿಮ್ಮ ಪುಸ್ತಕಗಳು, ಕಪ್ ಬೋರ್ಡ್ ಗಳನ್ನು ಸ್ವಚ್ಛ ಮಾಡಿ ಇಡಿ. ಇದು ನಿಮಗೆ ಬೆಳಗ್ಗೆ ತಯಾರಾಗಲು ಹಾಗೂ ಮುಂದಿನ ಸಲ ತಡವಾಗಿ ಮಲಗುವಾಗ ಬಳಸಿಕೊಳ್ಳಲು ಸಹಾಯವಾಗುತ್ತದೆ.
ಟಿವಿ ನೋಡಿ: ರಾತ್ರಿ ನಿದ್ದೆ ಬಂದಿಲ್ಲ ಅಂತ ಮೊಬೈಲ್ ಹಿಡಿಯುವ ಬದಲಿಗೆ ಟಿವಿಯಲ್ಲಿ ಬರುವ ಸಿನಿಮಾ, ಕಾಮಿಡಿ, ಕಾರ್ಟೂನ್ ಗಳನ್ನು ನೋಡಬಹುದು. ಬ್ಲಾಗ್ ಬರಿಯಿರಿ: ಎಷ್ಟೋ ರಾತ್ರಿ ನಿದ್ದೆ ಇಲ್ಲದೆ ಕಳೆಯುವುದಕ್ಕಿಂತ ಆ ಸಮಯವನ್ನು ಉಪಯುಕ್ತವಾಗಿ ಬಳಸಿಕೊಳ್ಳಿ. ನಿಮ್ಮಿಷ್ಟದ ವಿಚಾರವಾಗಿ ಒಂದು ಲೇಖನವನ್ನು ಬರೆಯೋದು ಉತ್ತಮ.
ಬಾಕಿ ಇರುವ ಕೆಲಸ: ಯಾವುದಾದರೂ ಕೆಲಸ ಮಾಡದೆ ಬಾಕಿ ಉಳಿದಿದ್ದರೆ. ಅದನ್ನು ರಾತ್ರಿ ಹೊತ್ತಿನಲ್ಲಿ ಮಾಡಿ ಮುಗಿಸೋದು ಉತ್ತಮ. ಇದು ಒತ್ತಡವನ್ನು ದೂರ ಮಾಡುತ್ತದೆ. ಶಾಪಿಂಗ್: ಯಾವುದಾದರು ಆನ್ ಲೈನ್ ಶಾಪಿಂಗ್ ಮಾಡಲು ಇದ್ದರೆ ಅದನ್ನು ಮಾಡಿಕೊಳ್ಳಿ. ಇದು ನಿಮ್ಮ ಸಮಯವನ್ನು ಉಳಿಸಲು ಸಹಕಾರಿಯಾಗಲಿದೆ.