ವಿಟ್ಲ: ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ಕೇಪುವಿನ ಎಸ್.ಡಿ.ಎಂ.ಸಿ., ಶ್ರೀ ಉಳ್ಳಾಲ್ತಿ ಸೇವಾ ಟ್ರಸ್ಟ್, ಹಳೆ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಶಾಲಾ ಅಭಿವೃದ್ಧಿ ಕುರಿತು ಸಮಾಲೋಚನಾ ಸಭೆ ನಡೆಯಿತು ನಡೆಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಹೈಕೋರ್ಟ್ ವಕೀಲರಾದ ರಾಜೇಶ್ ರೈ ಕಲ್ಲಂಗಳ, ಮುಖ್ಯ ಅತಿಥಿಗಳಾಗಿ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಭವಾನಿ ಶಿಪ್ಪಿಂಗ್ ಫೌಂಡೇಶನ್ ಇದರ ಆಡಳಿತ ನಿರ್ದೇಶಕರಾದ ಕುಸುಮೋದರ ಶೆಟ್ಟಿ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ವೆಂಕಟ ರಾಘವೇಂದ್ರ ಸ್ವಾಮಿ, ದೇವದಾಸ ರೈ ಕೇಪು, ಶ್ರೀನಿವಾಸ ರೈ ಕುಂಡಕೋಳಿ, ಪಂಚಾಯತ್ ಅಧ್ಯಕ್ಷರಾದ ಯಶಸ್ವಿನಿ ಶಾಸ್ತ್ರಿ, ಸದಸ್ಯರಾದ ಪುರುಷೋತ್ತಮ ಕೆ, ಜಗಜ್ಜೀವನ್ ರಾಮ್ ಮೈರ, ಉಪಸ್ಥಿತರಿದ್ದರು.

ಶ್ರೀ ಉಳ್ಳಾಲ್ತಿ ಸೇವಾ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಪಡಿಬಾಗಿಲು ಸ್ವಾಗತಿಸಿದರು. ಶಿಕ್ಷಕರಾದ ಸುರೇಶ್ ಶೆಟ್ಟಿ ಪ್ರಸ್ತಾವನೆ ಗೈದರು. ಬಾಲಕೃಷ್ಣ ಬೇಂಗ್ರೋಡಿ ಕಾರ್ಯಕ್ರಮ ನಿರೂಪಿಸಿ, ಮುಖ್ಯೋಪಾಧ್ಯಾಯನಿ ಭಾಗೀರಥಿಯವರು ವಂದಿಸಿದರು. ಶಿಕ್ಷಕ ವೃಂದದವರು ಹಾಗೂ ಟ್ರಸ್ಟ್ ನ ಕಾರ್ಯದರ್ಶಿಗಳಾದ ಉಮೇಶ್ ಗೌಡ ಕೊರತಿ ಗದ್ದೆ ರವರು ಸಹಕರಿಸಿದರು.

































