ಪುತ್ತೂರು: ಮುಖ್ಯ ರಸ್ತೆ ಮಯೂರ ಟಾಕೀಸ್ ಬಳಿ ಬಂಟರ ಸಭಾಭವನಕ್ಕೆ ತೆರಳುವ ರಸ್ತೆಯಲ್ಲಿ ಗೂಡ್ಸ್ ಸ್ವರಾಜ್ ಮಜ್ದಾ ಗಾಡಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದ ಕಬ್ಬಿಣದ ರಾಡು ಮತ್ತು ಸಲಾಕೆಗಳು ಏಕಾಏಕಿ ರಸ್ತೆಗೆ ಸುರಿಯಲಾರಂಭಿಸಿದವು. ಅದೃಷ್ಟವಶಾತ್ ಲಾರಿಯ ಹಿಂಬದಿಯಲ್ಲಿ ಯಾವುದೇ ವಾಹನಗಳು ಇಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿದಂತಾಯಿತು. ಕೂಡಲೇ ಸ್ಥಳಕ್ಕೆ ಧಾವಿಸಿದ ಸಂಚಾರಿ ಪೊಲೀಸರು ಮತ್ತು ಸ್ಥಳೀಯರು ರಸ್ತೆಯಿಂದ ಕಬ್ಬಿಣದ ರಾಡುಗಳನ್ನು ಬದಿಗಿರಿಸಿ ಸಹಕರಿಸಿದರು.