ಮಡಿಕೇರಿ: ಕಡುಕನೋರ್ವ ಮನೆಗೆ ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಿ 6 ಮಂದಿ ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಮಡಿಕೇರಿಯ ಪೊನ್ನಂಪೇಟೆ ತಾಲೂಕಿನ ಮುಗಟಗೇರಿ ಗ್ರಾಮದಲ್ಲಿ ನಡೆದಿದೆ.ಮಡಿಕೇರಿಯ ಪೊನ್ನಂಪೇಟೆಯ ಮುಟಗೇರಿ ಗ್ರಾಮದ ಬೋಜ ಎಂಬಾತ ಮದ್ಯ ಸೇವಿಸಿ ನೆರೆಮನೆಯ ಮಂಜು ಎನ್ನುವವರ ಮನೆಯ ಬಾಗಿಲು ಹಾಕಿ ಅವರ ಮನೆಗೆ ಬೆಂಕಿ ಹಚ್ಚಿದ್ದಾನೆ ಇದರಿಂದ ಮನೆಯೊಳಗೆ ನಿದ್ದೆ ಹೋಗಿದ್ದವರು ಬೆಂಕಿಗೆ ಆಹುತಿಯಾಗಿದ್ದಾರೆ.
ಒಟ್ಟು ಎಂಟು ಜನರಲ್ಲಿ ಮೂವರು ಸಜೀವ ದಹನವಾಗಿದ್ದು ಮೂವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆ ಮೂವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 3,6,7ವರ್ಷದ ಮಕ್ಕಳು ಸೇರಿದಂತೆ ಆರು ಜನ ಸಾವನ್ನಪ್ಪಿದರೆ ಇಬ್ಬರು ವಯಸ್ಕರು ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವನ್ನಪ್ಪಿರುವವರು 45ರ ಹರೆಯದ ಬೇಬಿ 40ರ ಹರೆಯದ ಸೀತೆ 7ರ ಹರೆಯದ ಪ್ರಕಾಶ್ 6ರ ಹರೆಯದ ಪ್ರಾರ್ಥನಾ ಮತ್ತು 3ರ ಹರೆಯದ ಕಂದಮ್ಮ ವಿಶ್ವಾಸ್ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.
ಪಾನಮತ್ತ ಭೋಜ ಹಾಗೂ ಆತನ ಪತ್ನಿ ನಡುವೆ ಜಗಳವಾಗಿದ್ದು, ಮಧ್ಯರಾತ್ರಿ ಪಕ್ಕದ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಇದರಿಂದ ಮನೆಯಲ್ಲಿ ಶಾಂತಿಯುತವಾಗಿ ಮಲಗಿದ್ದ 8ಮಂದಿಯಲ್ಲಿ 6ಮಂದಿ ಸಜೀವ ದಹನವಾಗಿದ್ದಾರೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.