ಮಂಗಳೂರು : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ಪರಿಹಾರ ಪಡೆಯಲು ರೈತರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಲು ಸೆಪ್ಟಂಬರ್ 22 ಕೊನೆಯ ದಿನವಾಗಿದೆ.
ರೈತರು ಇ-ಕೆವೈಸಿ ಮಾಡಿಸದಿದ್ದಲ್ಲಿ ಆರ್ಥಿಕ ನೆರವು ಸ್ಥಗಿತಗೊಳ್ಳಲಿದೆ. ಸ್ಮಾರ್ಟ್ ಫೋನ್ ಬಳಸುವ ರೈತರು //pmkisan.gov.in ಪೋರ್ಟಲ್ನ ಫಾರ್ಮರ್ಸ್ ಕಾರ್ನರ್ ಇ-ಕೆವೈಸಿ ಅವಕಾಶದಡಿ ತಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ದಾಖಲಿಸಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು.
ರೈತರು ನಾಗರಿಕ ಸೇವಾ ಕೇಂದ್ರ (ಸಿಎಸ್ಸಿ)/ ಗ್ರಾಮಒನ್ ಸೇವಾ ಕೇಂದ್ರದಲ್ಲಿಯೂ ಬಯೋ ಮೆಟ್ರಿಕ್ ಆಧಾರಿತವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು. ಮಾಹಿತಿಗೆ ಹತ್ತಿರದ ಹೋಬಳಿಯ ರೈತ ಸಂಪರ್ಕ ಕೇಂದ್ರ ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.