Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಡಿಕೇರಿಯಲ್ಲಿ ಮರ ಕಡಿಯುವ ವೇಳೆ ಅವಘಡ: ತೊಡಿಕಾನದ ಯುವಕ ಕಿರಣ್ ಮೃತ್ಯು..!

    ಮಡಿಕೇರಿಯಲ್ಲಿ ಮರ ಕಡಿಯುವ ವೇಳೆ ಅವಘಡ: ತೊಡಿಕಾನದ ಯುವಕ ಕಿರಣ್ ಮೃತ್ಯು..!

    ಕುದ್ಮಾರಿನಲ್ಲಿ ಮರ ಕಡಿಯುವಾಗ ಆಕಸ್ಮಿಕ ದುರ್ಘಟನೆ: ವ್ಯಕ್ತಿ ಸಾವು…!!

    ಕುದ್ಮಾರಿನಲ್ಲಿ ಮರ ಕಡಿಯುವಾಗ ಆಕಸ್ಮಿಕ ದುರ್ಘಟನೆ: ವ್ಯಕ್ತಿ ಸಾವು…!!

    ಬೆಳ್ತಂಗಡಿಯಲ್ಲಿ ರಾತ್ರೋರಾತ್ರಿ ಕಳ್ಳರ ಕೈ ಚಳಕ: ವಕೀಲರ ಕಚೇರಿ, ಹೋಟೆಲ್, ಅಂಗಡಿಗಳಿಗೆ ನುಗ್ಗಿದ ಕಳ್ಳರು ನಗದು ದೋಚಿ ಪರಾರಿ..!!

    ಬೆಳ್ತಂಗಡಿಯಲ್ಲಿ ರಾತ್ರೋರಾತ್ರಿ ಕಳ್ಳರ ಕೈ ಚಳಕ: ವಕೀಲರ ಕಚೇರಿ, ಹೋಟೆಲ್, ಅಂಗಡಿಗಳಿಗೆ ನುಗ್ಗಿದ ಕಳ್ಳರು ನಗದು ದೋಚಿ ಪರಾರಿ..!!

    ಪುತ್ತೂರು : ಬಪ್ಪಳಿಗೆ ನಿವಾಸಿ ಆರತಿ ಎ ನಾಯ್ಕ (ಚೇತನ) ನಿಧನ..!!

    ಪುತ್ತೂರು : ಬಪ್ಪಳಿಗೆ ನಿವಾಸಿ ಆರತಿ ಎ ನಾಯ್ಕ (ಚೇತನ) ನಿಧನ..!!

    ಪುತ್ತೂರು: ಚೆಕ್ ಅಮಾನ್ಯ ಪ್ರಕರಣ: 16.10 ಲಕ್ಷ ರೂ.ದಂಡ..!!

    ಪುತ್ತೂರು: ಚೆಕ್ ಅಮಾನ್ಯ ಪ್ರಕರಣ: 16.10 ಲಕ್ಷ ರೂ.ದಂಡ..!!

    ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳೋ ಕಾಮುಕರೇ ಹುಷಾರ್​​ : ನೂತನ ಕಾನೂನಿನಲ್ಲಿ ಸಂತ್ರಸ್ತೆಯರ ರಕ್ಷಣೆಗೂ ಹೊಸ ನಿಯಮ..!

    ಅಪ್ರಾಪ್ತ ಬಾಲಕರಿಗೆ ಬೈಕ್ ಚಾಲನೆಗೆ ಅವಕಾಶ: ಇಬ್ಬರು ವಾಹನ ಮಾಲೀಕರಿಗೆ ತಲಾ ₹25,000 ದಂಡ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಮಂಗಳೂರು

ಸಿಆರ್‌ಝಡ್‌: ಜಿಲ್ಲಾಡಳಿತದ ಆದೇಶ ಹೈಕೋರ್ಟ್‌ನಿಂದ ರದ್ದು: ಮಾನವ ಶ್ರಮದ ಮರಳುಗಾರಿಕೆಗೆ ಅವಕಾಶ..!!

September 13, 2022
in ಮಂಗಳೂರು
0
ಸಿಆರ್‌ಝಡ್‌: ಜಿಲ್ಲಾಡಳಿತದ ಆದೇಶ ಹೈಕೋರ್ಟ್‌ನಿಂದ ರದ್ದು: ಮಾನವ ಶ್ರಮದ ಮರಳುಗಾರಿಕೆಗೆ ಅವಕಾಶ..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆಗೆ ಜಿಲ್ಲಾಡಳಿತ ವಿಧಿಸಿದ್ದ ನಿಷೇಧವನ್ನು ಉಚ್ಚ ನ್ಯಾಯಾಲಯ ರದ್ದುಗೊಳಿಸಿದ್ದು ಯಂತ್ರೋಪಕರಣಗಳನ್ನು ಬಳಸದೆ ಮಾನವ ಶ್ರಮ (ಮ್ಯಾನ್ಯುವಲ್‌) ‌ ಮೂಲಕ ಮರಳೆತ್ತಲು ಅನುಮತಿಸಬಹುದು ಎಂದಿದೆ.

Advertisement
Advertisement

ಉಡುಪಿ ಜಿಲ್ಲೆಯ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆೆ ನಿಷೇಧ ವಿಧಿಸಿ ಹಸುರು ಪೀಠ (ಗ್ರೀನ್‌ ಟ್ರಿಬ್ಯೂನಲ್‌) ನೀಡಿದ್ದ ಆದೇಶದ ಆಧಾರದಲ್ಲಿ ದಕ್ಷಿಣ ಕನ್ನಡದಲ್ಲೂ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆ ನಿಷೇಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ತಾತ್ಕಾಲಿಕ ಪರವಾನಿಗೆ ಹೊಂದಿದ್ದ 30 ಮಂದಿ ಉಚ್ಚ ನ್ಯಾಯಾಲಯದ ಮೆಟ್ಟಲೇರಿದ್ದರು. ರಾಜ್ಯ ಸರಕಾರ, ಕೇಂದ್ರ ಸರಕಾರ, ಕರ್ನಾಟಕ ರಾಜ್ಯ ಕರಾವಳಿ ನಿಯಂತ್ರಣ ಪ್ರಾಧಿಕಾರ, ಏಳು ಸದಸ್ಯರ ದ.ಕ. ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗಣಿ ಹಾಗೂ ಭೂವಿಜ್ಞಾನ ಇಲಾಖೆ ಉಪನಿರ್ದೇಶಕರು ಪ್ರತಿವಾದಿಗಳಾಗಿದ್ದರು. ಸೆ.3 ರಂದು ನ್ಯಾಯಾಲಯ ಆದೇಶ ನೀಡಿದೆ.

ಉಡುಪಿ ಜಿಲ್ಲೆಯಲ್ಲಿ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆ ನಿಷೇಧ ಕೋರಿ ಅಲ್ಲಿನ ಕೆಲವು ಮಂದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹಸುರು ಪೀಠ ಅಲ್ಲಿ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆಯನ್ನು ನಿಷೇಧಿಸಿ 2022ರ ಮೇ.18 ರಂದು ಆದೇಶಿಸಿತ್ತು. ಇದರಂತೆ ದ.ಕ. ಜಿಲ್ಲಾಧಿಕಾರಿಯವರು ಮೇ 21ರಂದು ಜಿಲ್ಲೆಯಲ್ಲೂ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿದ್ದು ತಾತ್ಕಾಲಿಕ ಪರವಾನಿಗೆ ಹೊಂದಿದ್ದವರಿಗೆ ಮೇ 23ರಂದು ನೊಟೀಸ್‌ ನೀಡಲಾಗಿತ್ತು.

Advertisement

ಸೆ. 30ರ ಬಳಿಕ ಸ್ಪಷ್ಟ ಚಿತ್ರಣ

ಹಸುರು ಪೀಠದ ಆದೇಶದ ಆಧಾರದಲ್ಲಿ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆ ನಿಷೇಧಕ್ಕೆ ಮೊದಲು ನೀಡಿದ್ದ ಪರವಾನಿಗೆಗಳಲ್ಲಿ ಮಳೆಗಾಲದ ಹಿನ್ನೆಲೆಯಲ್ಲಿ ಜೂ. 1ರಿಂದ ಸೆ. 30ರ ವರೆಗೆ 4 ತಿಂಗಳು ಮರಳುಗಾರಿಕೆ ನಡೆಸಲು ನಿಷೇಧ ವಿಧಿಸಲಾಗಿದೆ. ಹಿನ್ನೆಲೆಯಲ್ಲಿ ಮರಳುಗಾರಿಕೆ ಅವಕಾಶದ ಬಗ್ಗೆ ಸೆ. 30ರ ಬಳಿಕವಷ್ಟೇ ಸ್ಪಷ್ಟ ಚಿತ್ರಣ ದೊರೆಯಲಿದೆ.

ಸುಪ್ರೀಂ ಕೋರ್ಟ್‌ಗೆ ಅರ್ಜಿ..!!

ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆಗೆ ಹಸಿರು ಪೀಠದಿಂದ ನಿರ್ಬಂಧ ಹಿನ್ನೆಲೆಯಲ್ಲಿ ಈ ವಲಯದಲ್ಲಿ ಮರಳು ತೆಗೆಯುವಿಕೆ ಸ್ಥಗಿತಗೊಂಡಿದೆ. ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆಗೆ ನಿಷೇಧ ವಿಧಿಸಿರುವ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಾಂಪ್ರದಾಯಿಕ ಮರಳು ಗುತ್ತಿಗೆದಾರರು ಅರ್ಜಿಸಲ್ಲಿಸಿದ್ದಾರೆ.

ಆದೇಶದಲ್ಲೇನಿದೆ..!??

ಉಡುಪಿ ಜಿಲ್ಲೆಯಲ್ಲಿ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಬರುವ ನದಿತೀರಗಳಲ್ಲಿ ಅಕ್ರಮ ಮರಳುಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹಸುರುಪೀಠ ಆದೇಶ ಹೊರಡಿಸಿತ್ತು. ಈ ಆದೇಶವನ್ನು ದ.ಕ.ದಲ್ಲಿ ತಾತ್ಕಾಲಿಕ ಪರವಾನಿಗೆ ಹೊಂದಿರುವವರಿಗೆ ಅವರ ಅಹವಾಲುಗಳನ್ನು ಆಲಿಸದೆ ಅನ್ವಯಿಸುವಂತಿಲ್ಲ. ಹಸುರುಪೀಠದ ಆದೇಶವು ಮಾನವಶ್ರಮದ ಮೂಲಕ ಮರಳು ತೆಗೆಯುವುದಕ್ಕೆ ಸಂಪೂರ್ಣ ನಿಷೇಧ ಹೇರಿದೆ ಎಂದು ಅರ್ಥವಲ್ಲ.

ತಾತ್ಕಾಲಿಕ ಪರವಾನಿಗೆದಾರರಿಗೆ 2022ರ ಮೇ 21ರಂದು ಹೊರಡಿಸಿದ್ದ ಆದೇಶ ಹಾಗೂ ಮೇ 23ರಂದು ನೀಡಿರುವ ನೋಟಿಸು ಹಸುರುಪೀಠದ ಆದೇಶವನ್ನು ತಪ್ಪಾಗಿ ವ್ಯಾಖ್ಯಾನಿಸಿ ನೀಡಿದ್ದಾಗಿದ್ದು ಅದು ಕಾನೂನಿನ ದೃಷ್ಟಿಯಲ್ಲಿ ನಿಲ್ಲುವುದಿಲ್ಲ. ಆದುದರಿಂದ ರದ್ದುಪಡಿಸಲಾಗಿದೆ. ಪ್ರತಿವಾದಿಗಳು (ಸರಕಾರ) ಯಂತ್ರ ಬಳಸಿ ಅಕ್ರಮ ಮರಳುಗಾರಿಕೆ ನಡೆಯದಂತೆ ಕ್ರಮ ಕೈಗೊಳ್ಳಲು ಸ್ವಾತಂತ್ರ್ಯ ಹೊಂದಿದ್ದಾರೆ. ಅರ್ಜಿದಾರರಿಗೆ ತಾತ್ಕಾಲಿಕ ಪರವಾನಿಗೆಯಲ್ಲಿ ವಿಧಿಸಿದ ಷರತ್ತುಗಳಂತೆ ಮಾನವಶ್ರಮದ ಮರಳುಗಾರಿಕೆಗೆ ಅನುಮತಿ ನೀಡಬಹುದಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ನ್ಯಾಯಾಲಯದ ಆದೇಶ ಜಿಲ್ಲಾಡಳಿತಕ್ಕೆ ಅಧಿಕೃತವಾಗಿ ಬಂದ ಬಳಿಕ ಅದನ್ನು ಪರಿಶೀಲಿಸಿಕೊಂಡು ರಾಜ್ಯ ಸರಕಾರದ ನಿರ್ದೇಶನದಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ರವರು ತಿಳಿಸಿದ್ದಾರೆ.

Previous Post

ಎಸ್.ಡಿ.ಪಿ.ಐ ಮುಖಂಡರ ಮನೆ ಮೇಲೆ ನಡೆದ ಎನ್ಐಎ ದಾಳಿ ಖಂಡಿಸಿ ಪ್ರತಿಭಟನೆ: ಹಿಂದೂ-ಮುಸ್ಲಿಂ ಗಲಾಟೆಯಲ್ಲಿ ಮುಸಲ್ಮಾನ ಆರೋಪಿಗಳಿದ್ದರೆ ಅವರೆಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕರ್ತರು – ಕೆ.ಸಿ.ಅಶ್ರಫ್

Next Post

ಪಿ.ಎಂ-ಕಿಸಾನ್‌ ಸಮ್ಮಾನ್ ನಿಧಿ: ಇ-ಕೆವೈಸಿ ಗಡುವು ಸೆ.22ರ ತನಕ ವಿಸ್ತರಣೆ

OtherNews

ಲಿಫ್ಟ್‌ನಲ್ಲಿ ಸಿಲುಕಿ ಬೆಳಾಲಿನ ಯುವಕ ಸಾವು..!!
Featured

ಲಿಫ್ಟ್‌ನಲ್ಲಿ ಸಿಲುಕಿ ಬೆಳಾಲಿನ ಯುವಕ ಸಾವು..!!

May 17, 2026
ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಸಿಡಿಲಘಾತ: ಗೋಪುರಕ್ಕೆ ಹಾನಿ..!!
ಬೆಳ್ತಂಗಡಿ

ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಸಿಡಿಲಘಾತ: ಗೋಪುರಕ್ಕೆ ಹಾನಿ..!!

May 16, 2026
ಸಿಸಿ ಕ್ಯಾಮೆರಾ ಕಣ್ಗಾವಲಿಗೆ ಸಿಕ್ಕ ತಾತ್ಕಾಲಿಕ ಅಂಗಡಿ: ತಕ್ಷಣ ತೆರವು ಕಾರ್ಯಾಚರಣೆ..!
ಕ್ರೈಮ್

ಸಿಸಿ ಕ್ಯಾಮೆರಾ ಕಣ್ಗಾವಲಿಗೆ ಸಿಕ್ಕ ತಾತ್ಕಾಲಿಕ ಅಂಗಡಿ: ತಕ್ಷಣ ತೆರವು ಕಾರ್ಯಾಚರಣೆ..!

May 16, 2026
ಮೂಡಬಿದ್ರೆಯಲ್ಲಿ ಅಕ್ರಮ ಜಾನುವಾರು ಸಾಗಾಟ: ಇಬ್ಬರ ಬಂಧನ, ಕರು ರಕ್ಷಣೆ..!!
Featured

ಮೂಡಬಿದ್ರೆಯಲ್ಲಿ ಅಕ್ರಮ ಜಾನುವಾರು ಸಾಗಾಟ: ಇಬ್ಬರ ಬಂಧನ, ಕರು ರಕ್ಷಣೆ..!!

May 15, 2026
ಮಂಗಳೂರು: ಸ್ಪೀಕರ್ ಯು.ಟಿ. ಖಾದರ್‌ಗೆ ಗೆರಾವ್ ಪ್ರಕರಣ – 11 ಜನರ ವಿರುದ್ಧ FIR ದಾಖಲು
Featured

ಮಂಗಳೂರು: ಸ್ಪೀಕರ್ ಯು.ಟಿ. ಖಾದರ್‌ಗೆ ಗೆರಾವ್ ಪ್ರಕರಣ – 11 ಜನರ ವಿರುದ್ಧ FIR ದಾಖಲು

May 14, 2026
ಕಾಲೇಜು ವಿದ್ಯಾರ್ಥಿನಿಯಿಂದ ಡ್ರಗ್ಸ್ ಪೂರೈಕೆ ಆರೋಪ: ಬಂಧನ: ₹35 ಲಕ್ಷ ಮೌಲ್ಯದ ಮಾದಕ ವಸ್ತು ವಶ..!!
Featured

ಕಾಲೇಜು ವಿದ್ಯಾರ್ಥಿನಿಯಿಂದ ಡ್ರಗ್ಸ್ ಪೂರೈಕೆ ಆರೋಪ: ಬಂಧನ: ₹35 ಲಕ್ಷ ಮೌಲ್ಯದ ಮಾದಕ ವಸ್ತು ವಶ..!!

May 13, 2026

Leave a Reply Cancel reply

Your email address will not be published. Required fields are marked *

Recent News

ಮಡಿಕೇರಿಯಲ್ಲಿ ಮರ ಕಡಿಯುವ ವೇಳೆ ಅವಘಡ: ತೊಡಿಕಾನದ ಯುವಕ ಕಿರಣ್ ಮೃತ್ಯು..!

ಮಡಿಕೇರಿಯಲ್ಲಿ ಮರ ಕಡಿಯುವ ವೇಳೆ ಅವಘಡ: ತೊಡಿಕಾನದ ಯುವಕ ಕಿರಣ್ ಮೃತ್ಯು..!

May 19, 2026
ಕುದ್ಮಾರಿನಲ್ಲಿ ಮರ ಕಡಿಯುವಾಗ ಆಕಸ್ಮಿಕ ದುರ್ಘಟನೆ: ವ್ಯಕ್ತಿ ಸಾವು…!!

ಕುದ್ಮಾರಿನಲ್ಲಿ ಮರ ಕಡಿಯುವಾಗ ಆಕಸ್ಮಿಕ ದುರ್ಘಟನೆ: ವ್ಯಕ್ತಿ ಸಾವು…!!

May 19, 2026
ಬೆಳ್ತಂಗಡಿಯಲ್ಲಿ ರಾತ್ರೋರಾತ್ರಿ ಕಳ್ಳರ ಕೈ ಚಳಕ: ವಕೀಲರ ಕಚೇರಿ, ಹೋಟೆಲ್, ಅಂಗಡಿಗಳಿಗೆ ನುಗ್ಗಿದ ಕಳ್ಳರು ನಗದು ದೋಚಿ ಪರಾರಿ..!!

ಬೆಳ್ತಂಗಡಿಯಲ್ಲಿ ರಾತ್ರೋರಾತ್ರಿ ಕಳ್ಳರ ಕೈ ಚಳಕ: ವಕೀಲರ ಕಚೇರಿ, ಹೋಟೆಲ್, ಅಂಗಡಿಗಳಿಗೆ ನುಗ್ಗಿದ ಕಳ್ಳರು ನಗದು ದೋಚಿ ಪರಾರಿ..!!

May 19, 2026
ಪುತ್ತೂರು : ಬಪ್ಪಳಿಗೆ ನಿವಾಸಿ ಆರತಿ ಎ ನಾಯ್ಕ (ಚೇತನ) ನಿಧನ..!!

ಪುತ್ತೂರು : ಬಪ್ಪಳಿಗೆ ನಿವಾಸಿ ಆರತಿ ಎ ನಾಯ್ಕ (ಚೇತನ) ನಿಧನ..!!

May 19, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.