ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಪುತ್ತೂರು ಇವರ ವತಿಯಿಂದ ಸುಬೋಧ ಪ್ರೌಢಶಾಲೆ, ಪಾಣಾಜೆ ಇಲ್ಲಿ ನಡೆದ ಪುತ್ತೂರು ವೃತ್ತಮಟ್ಟದ ಪ್ರತಿಭಾಕಾರಂಜಿಯಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ 10ನೇ ತರಗತಿಯ ಆಂಗಿಕಾಶೆಟ್ಟಿ (ರಾಜ್ ಶೆಟ್ಟಿ , ಸ್ವಸ್ತಿಕಾ. ಆರ್.ಶೆಟ್ಟಿ ದಂಪತಿಪುತ್ರಿ)
ಭರತನಾಟ್ಯದಲ್ಲಿ ಪ್ರಥಮ, 10ನೇ ತರಗತಿಯ ತನ್ವಿಶೆಣೈ ( ವಿಶ್ವಾಸ್ಶೆಣೈ, ಶಾಂತೇರಿ ಶೆಣೈ ದಂಪತಿ ಪುತ್ರಿ) ಇಂಗ್ಲಿಷ್ ಭಾಷಣದಲ್ಲಿ ಪ್ರಥಮ, 10ನೇ ತರಗತಿಯ ಸಾನ್ವಿಕ ಜೆ (ಡಾ. ಚರಣ್ ಕಜೆ, ಡಾ.ರಮ್ಯಾ ಕಜೆ ದಂಪತಿ ಪುತ್ರಿ) ಗಝಲ್ನಲ್ಲಿ ಪ್ರಥಮ, 10ನೇ ತರಗತಿಯ ಶರಣ್ (ಸೀತಾರಾಮರೈ, ಸವಿತಾ ರೈ ದಂಪತಿ ಪುತ್ರ) ಹಾಸ್ಯದಲ್ಲಿ ಪ್ರಥಮ, 10ನೇ ತರಗತಿಯ ಧನುಷ್ (ದಿನೇಶ್ ಪ್ರಸನ್ನ , ಉಮಾ.ಡಿ. ಪ್ರಸನ್ನ ದಂಪತಿ ಪುತ್ರ) ಮತ್ತು ಹಿಮಾನಿ (ಚಿದಾನಂದ, ಶೋಭಾ ದಂಪತಿ ಪುತ್ರಿ) ಇವರ ತಂಡ ರಸಪ್ರಶ್ನೆಯಲ್ಲಿ ಪ್ರಥಮ, 9ನೇ ತರಗತಿಯ ಅಮೋಘಕೃಷ್ಣ (ಬಾಲಕೃಷ್ಣಭಟ್, ಸುಮಿತ್ರಾ ಭಟ್ ದಂಪತಿ ಪುತ್ರ) ಜನಪದ ಗೀತೆಯಲ್ಲಿ ಪ್ರಥಮ, 10ನೇ ತರಗತಿಯ ಅರ್ಚನಾ ಕಿಣಿ (ಹರೀಶ್ ಕಿಣಿ, ವಿನಯಾ ಕಿಣಿ ದಂಪತಿಪುತ್ರಿ) ಸಂಸ್ಕೃತ ಭಾಷಣದಲ್ಲಿ ದ್ವಿತೀಯ, 10ನೇ ತರಗತಿಯ ಪೂರ್ವಿರೈ (ಅರುಣ್ಪ್ರಕಾಶ್ರೈ, ಸವಿತಾ ರೈ ದಂಪತಿ ಪುತ್ರಿ)
ಕನ್ನಡ ಭಾಷಣದಲ್ಲಿ ದ್ವಿತೀಯ, 10ನೇತರಗತಿಯ ತೇಜಚಿನ್ಮಯಹೊಳ್ಳ (ಹರೀಶ್ಹೊಳ್ಳ, ಸುಚಿತ್ರಾ ಹೊಳ್ಳ ದಂಪತಿ ಪುತ್ರ) ಭಾವಗೀತೆಯಲ್ಲಿ ದ್ವಿತೀಯ, 10ನೇ ತರಗತಿಯ ಧಾತ್ರಿ (ದಿನೇಶ್, ಪದ್ಮಲಕ್ಷ್ಮೀ ದಂಪತಿ ಪುತ್ರಿ) ಸಾಮಾನ್ಯ ಕನ್ನಡ ಭಾಷಣದಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡು ತಾಲೂಕುಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಗಳಿಗೆ ಆಯ್ಕೆಯಾಗಿರುತ್ತಾರೆ. ಮಾತ್ರವಲ್ಲದೇ, ಶಾಲಾ ತಂಡ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.