ಪುತ್ತೂರಿನಲ್ಲಿ ನ್ಯಾಯವಾದಿ ಯಾಗಿರುವ ಸಾಯಿರಾ ಝುಬೈರ್ ರವರನ್ನು ಭಾರತ ಜೋಡೋ ಯಾತ್ರೆಯ ಮೈಸೂರ್ ವಿಭಾಗದ ಸಂಯೋಜಕಿಯನ್ನಾಗಿ ಕಾಂಗ್ರೆಸ್ ಪಕ್ಷ ನೇಮಕ ಗೊಳಿಸಿದೆ
ಸಾಯಿರಾ ಝುಬೈರ್ ರವರು DCC ಸದಸ್ಯರಾಗಿದ್ದು ಪ್ರಸ್ತುತ ಮಹಿಳಾ ಕಾಂಗ್ರೆಸ್ ನ ರಾಜ್ಯ ಕಾರ್ಯದರ್ಶಿ ಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಸಾಯಿರಾರವರು ಹಲವಾರು ಸಮಾಜಮುಖಿ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯ ಕರ್ತೆಯಾಗಿರುತ್ತಾರೆ.

ಮಾಜಿ ಸಚಿವೆ ಮೋಟಮ್ಮ ಅಧ್ಯಕ್ಷತೆಯ ರಾಜ್ಯ ಮಹಿಳಾ ಕಾಂಗ್ರೆಸ್ ನ ಸ್ತ್ರೀ ಶಕ್ತಿ ಸಂಘಟನೆಯು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಯಶಸ್ವಿಯ ಜವಾಬ್ದಾರಿ ಹೊತ್ತುಕೊಂಡಿದ್ದು, ಇದೀಗ ಯಾತ್ರೆಯ ಶ್ರೀ ಶಕ್ತಿ ಕಮಿಟಿಯ ಮೈಸೂರ್ ವಿಭಾಗದ ಸಂಯೋಜಕಿ ಯಾಗಿ ನೇಮಕ ಮಾಡಿದೆ.