ಪುತ್ತೂರು: ಕೋವಿಡ್ ಕಟ್ಟು ನಿಟ್ಟಿನ ಆದೇಶಕ್ಕೆ ಸಂಬಂಧಿಸಿ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ
ಗದ್ದೆಯಲ್ಲಿರುವ ಸಾಮಾಜಿಕ ಅಂತರ ಕಾಯ್ದುಕೊಂಡು
ಸ್ಟಾಲ್ ಗಳನ್ನು ತಕ್ಷಣ ತೆರವು ಗೊಳಿಸಲು ಜಿಲ್ಲಾಡಳಿತ
ಸೂಚನೆಯಂತೆ ದೇವಳದ ಕಾರ್ಯನಿರ್ವಹಣಾಧಿಕಾರಿ
ನವೀನ್ ಭಂಡಾರಿ ಅವರು ಸೂಚನೆ ನೀಡಿದ್ದಾರೆ.
ಎ.17 ರಂದು ಬ್ರಹ್ಮರಥೋತ್ಸವದ ಮರುದಿನ ಎ.18 ರಂದು ದೇವಳದ ಅವಭೃತ ಸವಾರಿ ನಡೆಯಲಿದೆ. ಆದರೆ ಈ ನಡುವೆ ಜಿಲ್ಲಾಧಿಕಾರಿಗಳ ಕಟ್ಡು ನಿಟ್ಡಿನ ಸೂಚನೆಯಂತೆ ದೇವಳದ ಗದ್ದೆಯಲ್ಲಿ ಕೋವಿಡ್ ನಿಯಮವಳಿಯಂತೆ ಸಾಮಾಜಿಕ ಅಂತರ ಕಾಯ್ದು ಕೊಂಡು ಅಳವಡಿಸಿದ ಸ್ಟಾಲ್ ಗಳನ್ನು ತೆರವು ಗೊಳಿಸಲು ಸೂಚನೆ ನೀಡಿದರಿಂದ ಜಾತ್ರೆ ಗದ್ದೆಯಲ್ಲಿ ಬಹುತೇಕ ಸ್ಟಾಲ್ ಸ್ವಯಂ ಪ್ರೇರಿತವಾಗಿ ತೆರವುಗೊಂಡವು. ಜಾತ್ರೆಗೆ ಸಂಬಂಧಿಸಿ ದೇವಳದ ಮಾಹಿತಿ ಕೇಂದ್ರದಿಂದ ರಾಜೇಶ್ ಬನ್ನೂರು ಸ್ಟಾಲ್ ಗಳ ತೆರವು ಮಾಡಲು ಉದ್ಘೋಷಣೆ ಮಾಡುತ್ತಿದ್ದಾರೆ.