ಪುತ್ತೂರು: ಎಣ್ಮೂರು ಗರಡಿಯಿಂದ ಗಂಧಪ್ರಸಾದ,ತೀರ್ಥವನ್ನು ಎಣ್ಮೂರಿನ ಕೋಟಿಚೆನ್ನಯ ಗರಡಿಯ ಆಡಳಿತ ಮುಖ್ಯಸ್ಥರಾದ ರಾಮಕೃಷ್ಣ ಶೆಟ್ಟಿ ಮತ್ತು ಪದ್ಮಾ ಆರ್ ಶೆಟ್ಟಿ ದಂಪತಿಗಳು ಜೊತೆಗೆ ಲೋಕನಾಥ್ ರವರು ಪಡುಮಲೆ ಕ್ಷೇತ್ರಕ್ಕೆ ತಂದರು.
ಅವರು ಗಂಧಪ್ರಸಾದ,ಹಾಗೂ ತೀರ್ಥವನ್ನು ಪಡುಮಲೆಯ ಅರಮನೆ ಇದ್ದ ಕ್ಷೇತ್ರಕ್ಕೆ ತಂದು ಅಲ್ಲಿ ಕೋಟಿಚೆನ್ನಯರಿಗೆ ಸಂಬಂಧಿಸಿದ ಕಲ್ಲಿಗೆ ಮತ್ತು ದೇಯಿಬೈದೆತಿ ಮದ್ದು ತಯಾರಿಸುತ್ತಿದ್ದ ಕಲ್ಲಿಗೆ ಸಂಪ್ರೋಕ್ಷಣೆ ಮಾಡಿ ಬಳಿಕ ಎರುಕೊಟ್ಯದಲ್ಲಿರುವ ತಾಯಿ ದೇಯಿಬೈದೆತಿಯ ಸಮಾಧಿಗೆ ಹಾಗೂ ನಾಗಬ್ರಹ್ಮರ ಗುಡಿ,ನಾಗನ ಕಟ್ಟೆ,ರಕ್ತೇಶ್ವರಿ ಕಟ್ಟೆಗೆ ಸಿಂಪಡಿಸಿ ಬಳಿಕ ತೀರ್ಥಬಾವಿಗೆ ಸಮರ್ಪಿಸಿ ಕ್ಷೇತ್ರವನ್ನು ಶುಧ್ಧಿಗೊಳಿಸಿದರು.
ಈ ಸಂಧರ್ಭದಲ್ಲಿ ಶಾಸಕ ಸಂಜೀವ ಮಠಂದೂರು,ಪಡುಮಲೆ ಕೋಟಿಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ನ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಉಪಾಧ್ಯಕ್ಷರಾದ ವಿಜಯಕುಮಾರ್ ಸೊರಕೆ,ಪ್ರವರ್ತಕ ಚರಣ್, ಪ್ರಧಾನ ಕಾರ್ಯದರ್ಶಿ ಸೀತಾರಾಮ ರೈ ಕೆದಂಬಾಡಿಗುತ್ತು,ಸಂಚಾಲಕ ರತನ್ ನಾಯಕ್ ಕರ್ನೂರು, ವೇದನಾಥ ಸುವರ್ಣ,ಸತೀಶ್ ರೈ ಚೆಲ್ಯಡ್ಕ,ಶೈಲೇಶ್ ಬೆಳ್ತಂಗಡಿ, ರತನ್ ಕುಮಾರ್ ಕರ್ನೂರು ಗುತ್ತು, ಚರಣ್ ಬೆಳ್ತಂಗಡಿ, ಬ್ರಹ್ಮಕಲಶೋತ್ವವ ಸಮಿತಿ ಪ್ರಧಾನ ಕಾರ್ಯದರ್ಶಿ ಸೀತಾರಾಮ ರೈ ಕೆದಂಬಾಡಿ ಗುತ್ತು ಕಾರ್ಯದರ್ಶಿ ಚಿನ್ಮಯಿ ಈಶ್ವರಮಂಗಲ , ಸುರೇಶ್ ಆಳ್ವ ಪುತ್ತೂರು ಯುವ ಉದ್ಯಮಿ ನವೀನ,ಶೆಟ್ಟಿ ಬಡಗನ್ನೂರು ಗ್ರಾ.ಪಂ ಉಪಾಧ್ಯಕ್ಷ ಸಂತೋಷ್ ಆಳ್ವ, ಜಿಕೆ ಸುವರ್ಣ ಗಣಸಿನಕುಮೆರು, ಗುರುಪ್ರಸಾದ್ ರೈ ಕುದ್ಕಾಡಿ ಮೊದಲಾದವರು ಉಪಸ್ಥಿತರಿದ್ದರು.