ಮಂಗಳೂರು: ಶಾಲಾ ಸಮವಸ್ತ್ರ ಧರಿಸಿ ರಸ್ತೆ ಮಧ್ಯೆ ನಮಾಜ್ ಮಾಡಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಘಟನೆ ಮಂಗಳೂರು ನಗರದ ಬಾವುಟ ಗುಡ್ಡೆಯ ಪಕ್ಕದ ರಸ್ತೆಯಲ್ಲಿ ನಡೆದಿದೆ ಎನ್ನಲಾಗಿದೆ.
ರಸ್ತೆಯಲ್ಲಿ ನಮಾಜ್ ಮಾಡಿದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ರಸ್ತೆ ಮಧ್ಯೆ ನಮಾಜ್ ಮಾಡಿದ್ದು, ಇದನ್ನು ಪ್ರಶ್ನಿಸುವವರು ಯಾರೂ ಇಲ್ಲವೇ..!!?? ಈ ರೀತಿ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
‘ಇದು ಪಾಕಿಸ್ತಾನ ಅಥವಾ ಯಾವುದೇ ಇಸ್ಲಾಮಿಕ್ ರಾಷ್ಟ್ರ
ದ ದೃಶ್ಯ ಅಲ್ಲ.., ಇದು ನಮ್ಮ ಹಿಂದೂತ್ವದ ಭದ್ರಕೋಟೆ ಮಂಗಳೂರಿನ ಬಾವುಟ ಗುಡ್ಡೆಯ ನಡು ರಸ್ತೆಯಲ್ಲಿ ನಮಾಝ್ ಮಾಡುವ ದೃಶ್ಯ. ಹಿಂದೂಗಳ ಪ್ರತಿಯೊಂದು ಹಬ್ಬಕ್ಕೆ ಅನುಮತಿ ಕೇಳುವ ಪೊಲೀಸ್ ಹಾಗೂ ಜಿಲ್ಲಾಡಳಿತ ಈಗ ಕಣ್ಣಿದ್ದೂ ಕುರುಡಂತೆ, ಹಿಂದೂತ್ವದ ಹೆಸರಲ್ಲಿ ಗೆದ್ದ ಬಿಜೆಪಿ ಪಕ್ಷದ ಜನಪ್ರತಿನಿಧಿಗೆ ಇದನ್ನು ನಿಲ್ಲಿಸಲು ತಾಕತ್ ಇಲ್ಲವೇ..!!?? ಎಂದೆಲ್ಲಾ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿದೆ..